ಹಜ್‌ಘರ್: ತಿಳಿಗೇಡಿ ಜಮೀರ್ ರಂಪಾಟ ಯಾರ ವಿರುದ್ಧ?

zameer-ahmed-bash-at-haj-ghar-who-was-targetted
ಬೆಂಗಳೂರು, ಜ.19: ಪುಣ್ಯಾತ್ಮ ಜಮೀರ್ ಅಹಮದ್ ಆ ಪಾಟಿ ರಂಪಾಟ ಮಾಡಿದ್ದಾದರೂ ಯಾರ ವಿರುದ್ಧ ಅಂದ್ಕೊಂಡ್ರಿ? ಬೇರೆ ಯಾರೂ ಅಲ್ಲ. ಸಾಧು ಸ್ವಭಾವದ ಹಿರಿಯ ಐಎಎಸ್ ಅಧಿಕಾರಿ ಸಯ್ಯದ್ ಜಮೀರ್ ಪಾಷಾ ಅವರ ವಿರುದ್ಧ. ಅಸಲಿಗೆ ಮುಸ್ಲಿಮರ ಈ ಬಹು ನಿರೀಕ್ಷಿತ ಹಜ್‌ಘರ್ ಎಂಬ ಸುಂದರ ಕನಸನ್ನು ಸಾಕಾರಗೊಳಿಸಿದ್ದೇ ಈ ನಿಸ್ಪೃಹ ಅಧಿಕಾರಿ.

ಇಂತಹ ಹಿರಿಯ ಅಧಿಕಾರಿಗೆ ಪಾಠ ಕಲಿಸುವ ಧಾರ್ಷ್ಯ ತೋರಿದ್ದು ಜಮೀರ್ ಎಂಬ ಪುಂಡ ಮನೋಭಾವದ ಶಾಸಕ ಜಮೀರ್. ಹಿರಿಯ ಐಎಎಸ್ ಗೆ ಪ್ರೋಟೋಕಾಲ್ ಶಿಷ್ಟಾಚಾರ ಪಾಲಿಸುವುದು ಅತಿ ಮುಖ್ಯ. ಮಹತ್ವದ ಸಮಾರಂಭದಲ್ಲಿ ಯಾವುದೇ ಲೋಪ ಕಾಣಿಸಿಕೊಳ್ಳದಿರಲಿ ಎಂದು ಹಿರಿಯ ನಾಯಕ ಜಾಫರ್ ಷರೀಪ್ ಅವರ ಹೆಸರನ್ನು ವಿಳಂಬವಾಗಿ ಪ್ರಸ್ತಾಪಿಸಿರುವುದು ಅಕ್ಷಮ್ಯವೇನಲ್ಲ.

ಇದಕ್ಕೆ ಖುದ್ದು ಜಾಫರ್ ಷರೀಪ್ ಅವರೇ ಅಕ್ಷೇಪ ವ್ಯಕ್ತಪಡಿಸಿರಲಿಕ್ಕಿಲ್ಲ. ಅಂಥಾದ್ದರಲ್ಲಿ ಕೇವಲ ತನ್ನ ಇರುವಿಕೆಯನ್ನು ರುಜುವಾತುಪಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ತನ್ನದು ಎಲ್ಲಿಡಲಿ ಎಂದು ಗೂಳಿಯಂತೆ ನುಗ್ಗಿದ ಶಾಸಕ ಜಮೀರ್ ತಮ್ಮ ಪೂರ್ವಾಶ್ರಮದ ನೆನಪಿನಲ್ಲಿ ಪುಂಡಾಟಿಕೆ ಮೆರೆದೇ ಬಿಟ್ಟರು.

ಸಭೆಯಲ್ಲಿ ಸಮುದಾಯದ ಹಿರಿಯರ ಜತೆಗೆ ಸರಕಾರದ ಅಧಿಪತಿಗಳೂ ಇದ್ದಾರೆ ಎಂಬ ಪರಿಜ್ಞಾನವೂ ಇಲ್ಲದೆ ರಚ್ಚೆ ಹಿಡಿಡ ಚಿಕ್ಕ ಮಕ್ಕಳ ಥರ ಟೇಪಾಯ್ ಎಸೆದು ಸಜ್ಜನ ಜಮೀರ್ ಪಾಷಾ ಅವರತ್ತ ಕಿರುಚಾಡಿ, ತಮ್ಮ ಕೋಪತಾಪ ಪ್ರದರ್ಶಿಸಿದ್ದು ನಿಜಕ್ಕೂ ಅಸಹ್ಯವಾಗಿತ್ತು. ಖುದ್ದು ಮುಸ್ಲಿ ಬಾಂಧವರೇ ಜಮೀರ್ ಮಿಯಾ ರೌದ್ರಾವತಾರ ಕಂಡು ಬೆಕ್ಕಸಬೆರಗಾಗಿದ್ದಾರೆ.

ಎಲ್ಲ ಮುಗಿದ ಮೇಲೆ, ಸಮಾರಂಭವನ್ನು ರಾಜಕೀಯಗೊಳಿಸಿದ ತಿಳಿಗೇಡಿ ಜಮೀರ್ ಏಕಾಂಗಿಯಾಗಿ ಪೆಂಡಾಲ್ ಕೆಳಗೆ ಕುಳಿತು ನಡೆದ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದರೆ ... ಛೆ! ಎಂಥಾ ಅವಿವೇಕದ ಕೆಲಸ ಮಾಡಿಬಿಟ್ನೆಲ್ಲ ಎಂದು ಅವರಿಗೇ ಅನಿಸಿರಲಿಕ್ಕೂ ಸಾಕು.

ಹೋಗಲಿ ಯಾವ ಜನನಾಯಕನ (ಜಾಫರ್ ಷರೀಫ್‌) ಬಗ್ಗೆ ಗೌರವ ತೋರಲು ಜಮೀರ್ ರಂಪಾಟ ಮಾಡಿದರೋ, ಸರ್ವ ಜನಾಂಗದವರ ನೋವಿಗೆ ಸ್ಪಂದಿಸುವ ಆ ಜನನಾಯಕ ಗುಣವನ್ನು ಮುಂದಾದರೂ ಮೈಗೂಡಿಸಿಕೊಂಡರೆ ಸಾಕಾದೀತು! ಅಥವಾ ಯಾವ ಅಧಿಕಾರಿಯ ಬಗ್ಗೆ ಅವರು ಅಗೌರವವಾಗಿ ನಡೆದುಕೊಂಡರೋ ಅದೇ ಅಧಿಕಾರಿಯಲ್ಲಿರುವ ಜನಪರ ಕಾಳಜಿ ಇವರಲ್ಲಿ ಮೇಳೈಸಿದರೆ ಸಾಕಾದೀತು! ಏನಂತೀರಿ ಜಮೀರ್ ಮಿಯಾ? ಹಜ್ ಘರ್ ವೈಶಿಷ್ಯ್ಟಗಳೇನು? ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+