ವೇಶ್ಯಾವಾಟಿಕೆ ಆರೋಪಿಗಳಿಗೆ ಸಾವಿರ ರು. ದಂಡ ಸಾಕೆ?
ಗುಲಬರ್ಗಾ,
ಜ. 19 : ಗುಲಬರ್ಗಾ ನಗರ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜನತಾ ಲಾಜಿಂಗ್‌ದಲ್ಲಿ ರತಿಕ್ರೀಡೆಯಲ್ಲಿ ತೊಡಗಿದ ಆರೋಪಿಗಳಿಗೆ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಬಿ. ದಿಲೀಪಕುಮಾರ ಅವರು ತಲಾ 1,000 ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. id="toptextpromo">ಆರೋಪಿಗಳಾದ
ದಂಡೋತಿಯ ಚೆನ್ನಬಸಪ್ಪ ಹಾಗೂ ತೇಲ್ಕೂರಿನ ಲಕ್ಷ್ಮೀಬಾಯಿ 2007ರ ಡಿಸೆಂಬರ್ 5ರಂದು ಜನತಾ ಲಾಜ್ ಕೋಣೆ ಸಂಖ್ಯೆ 220ರಲ್ಲಿ ಬೆತ್ತಲಾಗಿ ರತಿಕ್ರೀಡೆಯಲ್ಲಿ ತೊಡಗಿದ್ದಾಗ ಸ್ಟೇಷನ್ ಬಜಾರ್ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಪಂಚರ ಸಮಕ್ಷಮದಲ್ಲಿ ಪೊಲೀಸ್ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿದ್ದರು. id='are-slot-1' class='oiad oi-axt oiadv'> id='top-searched-articles'>ಆರೋಪಿ
ಲಕ್ಷ್ಮಿಬಾಯಿ ವೇಶ್ಯಾವಾಟಿಕೆಗಾಗಿ ಬಂದು ಸಿಕ್ಕಿಬಿದ್ದಿದ್ದು ಮಾನವ ಸಾಗಾಣಿಕೆ ತಡೆ ಕಾಯ್ದೆಯ ಕಲಂ 7, 8(ಎ),(ಬಿ) ಅನ್ವಯ ಅಪರಾಧ ಮಾಡಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುವುದಾಗಿ, ಈ ಆರೋಪಿಗಳ ವಿರುದ್ಧ ಪೊಲೀಸ್ ಇನ್ಸ್‌ಪೆಕ್ಟರ್ ಯು.ಬಿ. ಚಿಕ್ಕಮಠ ಅವರು ದೋಷಾರೋಪಣ ಪತ್ರ ಸಲ್ಲಿಸಿದ್ದರು.











Click it and Unblock the Notifications