ಅವಿವೇಕಿ ಶೋಭಾ ಕರಂದ್ಲಾಜೆಗೆ ಇದು ಯಾಕ್ ಬೇಕಿತ್ತು?

shobha-karandlaje-gadag-better-hold-your-senses
ಗದಗ, ಜ.18: ಸಚಿವೆಯಾಗಿ ಆಯಕಟ್ಟಿನ ಸ್ಥಾನದಲ್ಲಿರುವ ಸಚಿವೆ ಶೋಭಾ ಕರಂದ್ಲಾಜೆ ಯಾಕ್ ಹೀಗ್ ಯಡವಟ್ಟು ಮಾಡ್ಕೊಂಡ್ರು? ನಿರ್ದಿಷ್ಟ ಜನರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುವ ಮುನ್ನ ಯೋಚಿಸಬಾರದಿತ್ತೇ? ಯಾವುದೋ ಜೋಶಿಗೆ ಬಿದ್ದು, ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದು ಇವರಿಗೆ ಯಾಕ್ ಬೇಕಿತ್ತು?

ಅಷ್ಟಕ್ಕೂ ಏನಯ್ತಾಪ್ಪಾ ಅಂದರೆ ಕಳೆದ ವಾರ ಶೋಭಾ ಮೇಡಂ ಗದಗದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಜನರ ಬಗ್ಗೆ ಅಪಾಯಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಅಲ್ಲಿನ ಕೊಳಚೆ ಪ್ರದೇಶದ ನಿವಾಸಿಗಳ ಬಗ್ಗೆ ಮಾತನಾಡುತ್ತಾ ಶೋಭಾ ಮೇಡಂ 'ಕೊಳಚೆ ಪ್ರದೇಶದ ಶಾಲೆಗಳಲ್ಲಿ ನಕ್ಸಲ್‌ ಪಾಠ ಮಾಡಲಾಗುತ್ತಿದೆ. ಈ ಪ್ರದೇಶಗಳು ಉಗ್ರರ ತಾಣಗಳಾಗಿವೆ' ಎಂಬ ಅವಿವೇಕಿ ಹೇಳಿಕೆ ನೀಡಿದ್ದಾರೆ.

ಅವರ ಮಾತುಗಳು ಎಷ್ಟು ಸಮಂಜಸ ಮತ್ತು ಸಮರ್ಥನೀಯ ಎಂಬುದು ಬೇರೆ ಮಾತು. ಆದರೆ ಅದಕ್ಕೂ ಮುನ್ನ ಜವಾಬ್ದಾರಿಯುತ ಸಚಿವೆಯಾಗಿ ಹೀಗೆ ಮಾತನಾಡಬಹುದಿತ್ತಾ? ಮೊದಲೇ ನಕ್ಸಲರು, ಶ್ರೀರಾಮಸೇನೆ... ಮತ್ತೊಂದು ಎಂದು ಅಲ್ಲಲ್ಲಿ ಅಶಾಂತಿ ಮೂಡಿರುವಾಗ ಶೋಭಾಗೆ ಯಾಕ್ ಬೇಕಿತ್ತು?

ತತ್ಫಲವಾಗಿ, ಕೊಳಚೆ ಪ್ರದೇಶದ ನಿವಾಸಿಗಳ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕೊಳಚೆ ಪ್ರದೇಶ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕರಂದ್ಲಾಜೆ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೋಭಾ ಮೇಡಂ ಇನ್ನಾದರೂ ಎಚ್ಚೆತ್ತುಕೊಂಡು, ಸ್ವಯಂ ನಿಯಂತ್ರಣದಲ್ಲಿರಲಿ. ನಾಡಿನ ಶಾಂತಿಗೆ ಭಂಗ ತಾರದಿಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+