ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬಾ ರಾಮದೇವ್ ಮುಖಕ್ಕೆ ಮಸಿ ಬಳಿದವನ ಬಂಧನ

By Mahesh
|
Google Oneindia Kannada News

Baba Ramdev
ನವದೆಹಲಿ, ಜ.14: ಯೋಗ ಗುರು ಬಾಬಾ ರಾಮದೇವ್ ಅವರನ್ನು ಹಿಡಿದು ಜಗ್ಗಾಡಿ, ಅವರ ಮುಖಕ್ಕೆ ಮಸಿ ಎಸೆದ ಪ್ರಕರಣ ಶನಿವಾರ ಮಧ್ಯಾಹ್ನ ನಡೆದಿದೆ.

ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ರಾಮದೇವ್ ಅವರ ವಿರುದ್ಧ ಹಲವರು ಪ್ರತಿಭಟನೆ ನಡೆಸಿ, ಘೋಷಣೆ ಕೂಗತೊಡಗಿದ್ದರು. ಮುಂಬರುವ ಚುನಾವಣೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲು ಬಾಬಾ ರಾಮದೇವ್ ಈ ಸುದ್ದಿಗೋಷ್ಠಿ ಕರೆದಿದ್ದರು.

ಮಸಿ ಎಸೆದ ವ್ಯಕ್ತಿಯ ಮೇಲೆ ನಂತರ ರಾಮದೇವ್ ಬೆಂಬಲಿಗರು ದಾಳಿ ನಡೆಸಿದ್ದಾರೆ. ರಾಮದೇವ್ ಅವರನ್ನು ಸ್ಥಳದಿಂದ ಬೇರೆಡೆಗೆ ಕರೆದೊಯ್ಯಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಾಬಾ ರಾಮದೇವ್, 'ವಿದೇಶಗಳಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರುವಂತೆ ಕೇಳಿದ್ದೇ ತಪ್ಪಾಗಿದೆ. ಈ ರೀತಿ ಬೆದರಿಕೆ, ದಾಳಿಗೆ ನಾನು ಎದುರುವುದಿಲ್ಲ. ನನ್ನ ಹೋರಾಟ ಮುಂದುವರೆಯಲಿದೆ' ಎಂದಿದ್ದಾರೆ.

ಬಾಬಾ ರಾಮದೇವ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ರಿಯಲ್ ಕಾಸ್ ಎಂಬ ಸರ್ಕಾರೇತರ ಸಂಸ್ಥೆ ನಡೆಸುವ ಕಮ್ರಾನ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಎನ್ ಐ ವರದಿ ಮಾಡಿದೆ.

English summary
Popular yoga guru Baba Ramdev, after enjoying adulation from the mass, now got a glimpse of their ire when he was heckled by protestors. The incident happened when he was carrying out a news conference in the capital. When the ruckus erupted, the protestors were beaten up by Ramdev supporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X