ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮ್ ಜಿ ವಿರುದ್ಧ 500 ಕೋಟಿ ಮಾನನಷ್ಟ ಮೊಕದ್ದಮೆ

By Srinath
|
Google Oneindia Kannada News

defamation-suit-against-azim-premji-rs-500-cr
ಬೆಂಗಳೂರು, ಜ.12: ಮುಂದಿನ ಸೋಮವಾರ ವಿಪ್ರೊ ಕಂಪನಿಯ ಅಧ್ಯಕ್ಷ ಅಜೀಂ ಪ್ರೇಮ್ ಜಿ ವಿರುದ್ಧ 500 ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ ಪ್ರಕರಣ ಮುಂಬೈ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ದೇಶದ ಅಗ್ಗದ ಚಿಲ್ಲರೆ ಮಾರಾಟದ ಸುಭಿಕ್ಷಾ ಕಂಪನಿಯು ಪ್ರೇಮ್ ಜಿ ವಿರುದ್ಧ ಈ ಪ್ರಕರಣ ದಾಖಲಿಸಿದೆ.

ಪ್ರೇಮ್ ಜಿ ಅವರು ಕಳೆದ ವರ್ಷ ಸಾಪ್ತಾಹಿಕ ಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಚೆನ್ನೈ ಮೂಲದ ಸುಭಿಕ್ಷಾ ಕಂಪನಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ತೀವ್ರವಾಗಿ ಘಾಸಿಗೊಂಡ ಸುಭಿಕ್ಷಾ, ದೇಶದ ಅಗ್ರ ಧನಿಕ ಪ್ರೇಮ್ ಜಿ ವಿರುದ್ಧ ಗುಡುಗಿದೆ.

2008ರಲ್ಲಿ ಪ್ರೇಮ್ ಜಿ ಅವರ ಖಾಸಗಿ ಹೂಡಿಕೆ ಕಂಪನಿ Zash Investment and Trading Co. Pvt Ltd ಸುಭಿಕ್ಷಾ ರಿಟೇಲ್ ಕಂಪನಿಯಲ್ಲಿ ಶೇ. 10ರಷ್ಟು ಷೇರು ಖರೀದಿಸಿದ್ದರು.

2009ರ ಫೆಬ್ರವರಿ ಮತ್ತು ಜೂನ್ ಅವಧಿಯಲ್ಲಿ ಸುಭಿಕ್ಷಾ ಕಂಪನಿಯು ಪ್ರೇಮ್ ಜಿ ಅವರ ಖಾಸಗಿ ಹೂಡಿಕೆ ಕಂಪನಿ ಜತೆ ಆರಂಭಿಕ ಮಾತುಕತೆ ನಡೆಸಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ಪಾಲನ್ನು ತನಗೇ ಮಾರಾಟ ಮಾಡಬೇಕು ಎಂದು ಪ್ರೇಮ್ ಜಿ ವರಾತ ತೆಗೆದಿದ್ದರು. ಆದರೆ ಸುಭಿಕ್ಷಾ ಅದನ್ನು ನಿರಾಕರಿಸಿತ್ತು. ಆ ಸಂದರ್ಭದಲ್ಲಿ ಸುಭಿಕ್ಷಾ ವಿರುದ್ಧ ಪ್ರೇಮ್ ಜಿ ವ್ಯವಸ್ಥಿತವಾಗಿ ಅಪಪ್ರಚಾರದಲ್ಲಿ ತೊಡಗಿ, ಕಂಪನಿಗೆ ನಷ್ಟವನ್ನುಂಟು ಮಾಡಿದ್ದರು ಎಂದು ದೂರಲಾಗಿದೆ.

English summary
India’s first low-cost retail chain, Subhiksha, has filed a Rs 500 crore defamation case against Azim Premji in Bombay High Court. The case is now scheduled for January 16 before HC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X