ರೀಟೈಲ್ ನಲ್ಲಿ 100% FDI, ಷೇರುಗಳು ಗಗನಕ್ಕೆ!

Indian retail stocks
ನವದೆಹಲಿ, ಜ.12: ಒಂದೇ ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿ, ಅಧಿಸೂಚನೆ ಹೊರಡಿಸಿದೆ. ಇದರಿಂದ ಫ್ಯಾಷನ್ ಸಂಸ್ಥೆಗಳ ಷೇರುಗಳು ಗಗನಕ್ಕೇರಿದೆ.

single-brand retail ನಲ್ಲಿ 'ಎಫ್‌ಡಿಐ' ಮೇಲಿನ ಗರಿಷ್ಠ ಮಿತಿಯನ್ನು ಶೇ 51ರಿಂದ ಶೇ 100ಕ್ಕೆ ಹೆಚ್ಚಿಸಲಾಗಿದೆ.

ಏಕ ಬ್ರಾಂಡ್ ಚಿಲ್ಲರೆ ವಹಿವಾಟು ಎಂದರೇನು?: ಸರಕುಗಳ ವಿತರಣೆ ಅಥವಾ ಮಾರಾಟ ವಹಿವಾಟು ನಡೆಸುವ ಸಂಸ್ಥೆಯೊಂದು ನಿರ್ದಿಷ್ಟ ಉತ್ಪನ್ನವೊಂದನ್ನು ತಯಾರಿಸಿ ಅದರ ಒಡೆತನದ ಜೊತೆಗೆ ಅದನ್ನು ಎಲ್ಲೆಡೆ ಸ್ವತಃ ತಾನೇ ಮಾರಾಟ ಮಾಡುವುದಕ್ಕೆ ಏಕ ಬ್ರಾಂಡ್ ಚಿಲ್ಲರೆ ವಹಿವಾಟು ಎನ್ನುವರು. ಉದಾ: Koutons Retail(ಜವಳಿ ಬ್ರ್ಯಾಂಡ್)(ಶೇ. 20 ರಷ್ಟು ಏರಿಕೆ ಕಂಡಿದೆ ಜ.12)

ಇದರಿಂದ ಇಟಲಿ ಮತ್ತು ಫ್ರಾನ್ಸ್‌ನ ಫ್ಯಾಷನ್ ಬ್ರಾಂಡ್‌ಗಳು ಭಾರತದ ಮಾರುಕಟ್ಟೆಯಲ್ಲಿ ತಮ್ಮ ವಹಿವಾಟನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ.

ಇದು ಪರೋಕ್ಷವಾಗಿ ದೇಶಿ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಿಸಲಿದೆ. ಆದರೆ ಸ್ಥಳೀಯ ಸಂಸ್ಥೆಗಳು ಜಾಗತಿಕ ವಿನ್ಯಾಸ, ತಂತ್ರಜ್ಞಾನ ಮತ್ತು ನಿರ್ವಹಣಾ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡು ಮಾರುಕಟ್ಟೆಯಲ್ಲಿ ಸ್ಪರ್ಧೆಗಿಳಿಯಬೇಕಿದೆ.

ಅಡಿಡಾಸ್ ಸೇರಿದಂತೆ ವಿವಿಧ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿನ ತಮ್ಮ ವಹಿವಾಟಿನಲ್ಲಿ ಪೂರ್ಣ ಪ್ರಮಾಣದ ಮಾಲೀಕತ್ವ ಹೊಂದಬಹುದಾಗಿದೆ.

ಫ್ಯಾಷನ್ ಕ್ಷೇತ್ರ ಅಲ್ಲದೆ ಶಾಪರ್ಸ್ ಸ್ಟಾಪ್ ಕೂಡಾ ಶೇ.12.8 ರಷ್ಟು ಏರಿಕೆ ಕಂಡಿದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+