ಲೆಹರ್ ಸಿಂಗ್ ಮನೆಗೆ ಧಾವಿಸಿದ ಶೋಭಾ ಕರಂದ್ಲಾಜೆ

bjp-leadership-leaders-meet-in-lehar-singh
ಬೆಂಗಳೂರು, ಜ.11: ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಇಂದು ಸಂಜೆ ಕೇಶವ ಶಿಲ್ಪಾದಲ್ಲಿ ನಿಗದಿಯಾಗಿರುವ ಆರ್ಎಸ್ಎಸ್ ಬೈಠಕ್ ಗೂ ಮುನ್ನ ಆರ್ಎಂವಿ ಎರಡನೇ ಹಂತದಲ್ಲಿರುವ ಲೆಹರ್ ಸಿಂಗ್ ಅವರ ಮನೆಯಲ್ಲಿ ಇದೀಗ ಪೂರ್ವಭಾವಿ ಸಭೆ ನಡೆದಿದೆ.

ಯಡಿಯೂರಪ್ಪ-ಈಶ್ವರಪ್ಪ ನಡುವಣ ಕಂದಕದಲ್ಲಿ ಯಡಿಯೂರಪ್ಪನವರ ಆತ್ಮೀಯ ಬಂಟ ಲೆಹರ್ ಸಿಂಗ್ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ವಿಧಾನ ಪರಿಷತ್ ಸದಸ್ಯ ಲೆಹರ್ ಅವರು ಸಂಧಾನಕಾರರಾಗಿ ಈ ಸಭೆ ಆಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ಯಡಿಯೂರಪ್ಪ ಅವರು ಈ ಸಭೆಯಲ್ಲಿ ಕಾಣಿಸಿಕೊಳ್ಳದೆ ಅಜ್ಞಾತರಾಗಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ತಂದಿದೆ.

ಸಭೆಗೆ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಈಶ್ವರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಆರ್ ಅಶೋಕ್ ಮುಂತಾದ ಪ್ರಮುಖ ನಾಯಕರು ಆಗಮಿಸಿದ್ದಾರೆ. ಆರ್ಎಸ್ಎಸ್ ನಾಯಕರೂ ಈ ಸಭೆಯಲ್ಲಿ ಪಾಲ್ಗೊಂಡಿರುವುದು ಕುತೂಹಲ ಮೂಡಿಸಿದೆ.

ಈ ಮಧ್ಯೆ, ವಿವಾದದ ಕೇಂದ್ರ ವ್ಯಕ್ತಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ದೃಢ ನಿರ್ಣಯಗಳನ್ನು ಈಗಾಗಲೇ ಲೆಹರ್ ಸಿಂಗ್ ಅವರಿಗೆ ತಿಳಿಸಿದ್ದು, ತಮ್ಮ ಪರವಾಗಿ ಅದನ್ನು ಬೈಠಕ್ ನಲ್ಲಿ ತಿಳಿಸುವಂತೆ ಲೆಹರ್ ಗೆ ಹೇಳಿರುವುದಾಗಿ ತಿಳಿದುಬಂದಿದೆ.

ಯಡಿಯೂರಪ್ಪ-ಈಶ್ವರಪ್ಪ ನಡುವಣ ಕಂದಕವನ್ನು ಮುಚ್ಚಲು ಬಿಜೆಪಿ ಮತ್ತು ಸಂಘ ಪರಿವಾರದ ಹಿರಿಯ ನಾಯಕರು ಹರಸಾಹಸ ಪಡುತ್ತಿದ್ದಾರೆ. ಆದ್ದರಿಂದ ಲೆಹರ್ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ. ಇಲ್ಲಿನ ನಿರ್ಧಾರವೇ ಬಹುತೇಕ ಅಂತಿಮವಾಗುವ ಲಕ್ಷಣಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+