ಚಿನ್ನದ ಬೆಲೆ ತಕ್ಷಣಕ್ಕೆ ಇಳಿಕೆ, 27,650ರು/10 ಗ್ರಾಂ

ಆದರೆ, ಚಿನ್ನದ ಬೆಲೆ ಇನ್ನೂ ಸ್ಥಿರತೆ ಕಂಡಿಲ್ಲವಾದರೂ, ಭಾರಿ ವ್ಯತ್ಯಾಸ ಆಗುವ ಲಕ್ಷಣಗಳು ಇನ್ನೂ ಗೋಚರಿಸಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಆರ್ಥಿಕ ಅಸ್ಥಿರತೆ ಹಾಗೂ ಕರೆನ್ಸಿಗಳ ಏರಿಳಿತದಿಂದಾಗಿ ಚಿನ್ನದ ಬೆಲೆ ಬಗ್ಗೆ ಈಗಲೇ ಏನು ಹೇಳಲಾಗದು.
ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್(MCX) ಪ್ರಕಾರ ಸ್ಪಾಟ್ ಚಿನ್ನದ[ಏನಿದು ಸ್ಪಾಟ್ ದರ] ಬೆಲೆ ಪ್ರತಿ 10 ಗ್ರಾಂಗೆ 27,560 ರು ನಂತೆ ವ್ಯಾಪಾರ ನಡೆಸುತ್ತಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ 27,592.00 ರು ಗೆ ಇಳಿಕೆ ಕಂಡಿತ್ತು.ಬೆಳ್ಳಿ ಪ್ರತಿ ಕೆಜಿಗೆ 50,796 ರು ಇದೆ.
ಸೋಮವಾರದ ಕನಿಷ್ಠ ದರ ಅಹಮದಾಬಾದ್ ನ ಚಿನಿವಾರ ಪೇಟೆಯಲ್ಲಿ ದಾಖಲಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ಬೆಲೆ 27,560 ರು ದಾಖಲಾಗಿತ್ತು.
ಸ್ಥಳೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೇಟ್ ಮೊತ್ತ 27,780 ರು(ಪ್ರತಿ 10 ಗ್ರಾಂಗೆ) ಹಾಗೂ 22 ಕ್ಯಾರೇಟ್ ಚಿನ್ನ 25,970 ರು(ಪ್ರತಿ 10 ಗ್ರಾಂಗೆ)ನಷ್ಟಿದೆ. ಬೆಳ್ಳಿ ದರ ಪ್ರತಿ ಕೆಜಿಗೆ 51,693 ರಿಂದ ರು 51,700 ನಷ್ಟಿದೆ.
ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ ಪ್ರತಿ 10 ಗ್ರಾಂ 28,000 ರು. 22K ಬೆಲೆ ಪ್ರತಿ 10 ಗ್ರಾಂಗೆ 25, 950 ರು ನಷ್ಟಿದೆ.












Click it and Unblock the Notifications