ಯಲಹಂಕ ಶಾಸಕ ವಿಶ್ವನಾಥ್ ಗೆ ಬಂಧನದ ಭೀತಿ
ಬೆಂಗಳೂರು,
ಜ.4: ಹದಿನೈದು ದಿನಗಳ ಹಿಂದೆ ಲೋಕಾಯುಕ್ತ ದಾಳಿಗೆ ತುತ್ತಾದ ಯಲಹಂಕದ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ವಿರುದ್ಧ ಲೋಕಾಯುಕ್ತ ಪೊಲೀಸರು ಕೋರ್ಟಿನಲ್ಲಿ ಜನವರಿ 6ರಂದು ಚಾರ್ಜ್ ಶೀಟ್ ದಾಖಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧನದ ಭೀತಿಗೊಳಗಾಗಿರುವ ವಿಶ್ವನಾಥ್ ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರ ಲೋಕಾಯುಕ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. id="toptextpromo">ಈ
ಜಾಮೀನು ಅರ್ಜಿಯು ಕೋರ್ಟ್ ಮುಂದೆ ಬುಧವಾರ ಅಥವಾ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಶಾಸಕ ಎಸ್ಆರ್ ವಿಶ್ವನಾಥ್ ಯಲಹಂಕ, ಹೆಬ್ಬಾಳ, ಹೆಸರಘಟ್ಟ, ದೊಡ್ಡಬಳ್ಳಾಪುರ ಅದರಾಚೆ ಗೌರಿಬಿದನೂರು ಹೀಗೆ ಎಲ್ಲೆಲ್ಲಿ ನೆಲ ಕಾಣೊತ್ತೋ ಅಲ್ಲೆಲ್ಲ ಸ್ಥಿರಾಸ್ತಿ ಮಾಡಿಟ್ಟಿದ್ದಾರೆ ಎಂಬುದು ಲೋಕಾಯುಕ್ತ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿರುವ ಸತ್ಯ. id='are-slot-1' class='oiad oi-axt oiadv'> id='top-searched-articles'>ಆದರೆ,
'ನನ್ನ ವಿರುದ್ಧದ ಆರೋಪಗಳೆಲ್ಲ ಸತ್ಯಕ್ಕೆ ದೂರವಾದವು. ನಾನು ಶಾಸಕ ಎಂಬ ಕಾರಣಕ್ಕೆ ದೂರು ನೀಡಲಾಗಿದೆ. ಈ ದೂರು ರಾಜಕೀಯ ಪ್ರೇರಿತ. ಜನಪ್ರತಿನಿಧಿಯಾಗಿ ಅಕ್ರಮ ಆಸ್ತಿ ಸಂಪಾದಿಸಿಲ್ಲ. ಎಲ್ಲದಕ್ಕೂ ಸೂಕ್ತ ದಾಖಲೆಗಳಿವೆ. ಆದ್ದರಿಂದ ನಾನು ಆರೋಪ ಮುಕ್ತನಾಗುವ ತನಕ ಬಂಧನಕ್ಕೆ ಅವಕಾಶ ನೀಡಬಾರದು. ಆ ಮೂಲಕ ನಿರೀಕ್ಷಣಾ ಜಾಮೀನು ನೀಡಬೇಕು' ಎಂದು ಅರ್ಜಿಯಲ್ಲಿ ವಿಶ್ವನಾಥ್ ಮನವಿ ಮಾಡಿದ್ದಾರೆ.











Click it and Unblock the Notifications