ಸಿಬಿಐ ಬಾಹು ಬಂಧನದಲ್ಲಿ ಜಗನ್: ಯಡ್ಡಿಗೂ ಲಿಂಕ್

jagan-vijay-sai-linked-to-sandur-power-bangalore
ಬೆಂಗಳೂರು, ಜ.3: ಜಗನ್ ಮೋಹನ್ ರೆಡ್ಡಿ ಅಕ್ರಮ ಆಸ್ತಿ ಸಂಪಾದನೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಆಶ್ರಯ ನೀಡಿದ್ದರೇ? ಎಂಬ ಪ್ರಶ್ನೆ ಹೈದರಾಬಾದಿನ ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಅವರನ್ನು ಬಹುವಾಗಿ ಕಾಡತೊಡಗಿದೆ.

ಏಕೆಂದರೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಅತ್ಯಾಪ್ತ ವಿ. ವಿಜಯ್ ಸಾಯಿ ರೆಡ್ಡಿ ಅವರನ್ನು ಸಿಬಿಐ ನಿನ್ನೆಯಷ್ಟೇ ಬಂಧಿಸಿದೆ. ಬೆಂಗಳೂರು ಮೂಲದ Sandur Power Company Limitedನ ಗೋಲ್ ಮಾಲ್ ಸಂಬಂಧ ಸಾಯಿ ರೆಡ್ಡಿ ಬಂಧನವಾಗಿದೆ.

ಜಗನ್ ನಿರ್ದೇಶನದಂತೆ 150 ಕೋಟಿ ರುಪಾಯಿ ಮೌಲ್ಯದ ಈ ಕಂಪನಿಯನ್ನು ಸಾಯಿ ರೆಡ್ಡಿ 797 ಕೋಟಿ ರು ಎಂದು ತೋರಿಸಿ, ಫುಲ್ ಗೋಲ್ ಮಾಲ್ ಮಾಡಿದ್ದಾರೆ ಎಂಬುದು ಸಿಬಿಐನ ಪ್ರಮುಖ ವಾದ. ಈ ಹಣವೆಲ್ಲ ಮನಿ ಲಾಂಡ್ರಿಂಗ್ ಮೂಲಕ ಮಾರಿಷಸ್ ಸೇರಿಕೊಂಡಿದೆ ಎಂಬುದಕ್ಕೆ ಸಿಬಿಐ ಈಗಾಗಲೇ ದಾಖಲೆ ಪುರಾವೆಗಳನ್ನು ಕಲೆ ಹಾಕಿದೆ.

ಯಡಿಯೂರಪ್ಪ- ಬೆಂಗಳೂರಿನ ನಂಟು: ಇಷ್ಟಕ್ಕೂ ಆಂಧ್ರದ ಜಗನ್ ಗೂ ಬೆಂಗಳೂರಿಗೂ ಏನಪ್ಪಾ ಸಂಬಂಧ ಅಂದರೆ ಅದು ಅಪಾರ ಮೌಲ್ಯದ್ದು. ಜಗನ್ ರ ಶ್ವೇತಭವನ ಇರುವುದು ಇಲ್ಲೇ ಯಲಹಂಕದಲ್ಲಿ. ಜತೆಗೆ, ಅವರ ಬೇನಾಮಿ ಕಂಪನಿಗಳು ಇರುವುದೂ ಇಲ್ಲೇ. ಅದರಲ್ಲೊಂದು ಈ Sandur Power Company Limited. ಇದು ಆರಂಭದಲ್ಲಿ ಎಚ್ಎಸ್ಆರ್ ಲೇಔಟಿನಲ್ಲಿತ್ತು. ನಂತರ ವೈಯಾಲಿಕಾವಲ್ ಗೆ ಶಿಫ್ಟ್ ಆಯಿತು.

ಈ ಕಂಪನಿಗೇ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ HLCC ಸಮಿತಿ ಅಂದಿನ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ನಿರ್ದೇಶನದಂತೆ ಅನುಮತಿ ನೀಡಿದೆ ಎನ್ನಲಾಗಿದೆ. ಕಂಪನಿಯ ಕುರಿತು ಹೆಚ್ಚಿನ ಮಾಹಿತಿ ಕೋರಿ ಸಿಬಿಐ ಬೆಂಗಳೂರಿನತ್ತ ಪಾದ ಬೆಳಸಿದರೆ ಯಡಿಯೂರಪ್ಪ, ನಿರಾಣಿ ಮತ್ತು HLCC ಸಮಿತಿಯನ್ನು (ಭಾರಿ ಕೈಗಾರಿಕೆಗಳ ಸ್ಥಾಪನೆಗೆ ಅನುಮೋದನೆ ನೀಡುವ ುನ್ನತ ಸಮಿತಿ. ಕರ್ನಾಟಕ ುದ್ಯೋಗ ಮಿತ್ರ ಇದರ ಉಸ್ತುವಾರಿ ಹೊತ್ತಿದೆ)ವಿಚಾರಣೆಗೊಳಪಡಿಸಬಹುದು ಎಂದು ತಿಳಿದು ಬಂದಿದೆ. ಸಂಡೂರು ವಿದ್ಯುತ್ ಕಂಪನಿಯ ಅಕ್ರಮಗಳು 'ದಟ್ಸ್ ಕನ್ನಡ'ದಲ್ಲಿ ಕೆಲವೇ ಕ್ಷಣಗಳಲ್ಲಿ ನಿರೀಕ್ಷಿಸಿ ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+