ಮುಸ್ಲೀಮರಿಗೆ ಮೀಸಲಾತಿ ತೊಗಾಡಿಯಾ ಪ್ರತಿಭಟನೆ

ಯುಪಿಎ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡುವುದಾಗಿ ವಿಹಿಂಪ ಹೇಳಿದೆ.
'ಒಬಿಸಿಗೆ ಇರುವ ಶೇ. 27 ಕೋಟಾದಲ್ಲಿ ಮುಸ್ಲಿಮರಿಗೆ ಶೇ. 4.5 ಮೀಸಲಾತಿ ಕಲ್ಪಿಸಿರುವುದು ಐದು ರಾಜ್ಯಗಳಲ್ಲಿನ ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿನ ರಾಜಕೀಯಪ್ರೇರಿತ ನಡೆಯಾಗಿದೆ. ನಾವು ಇದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಿದ್ದೇವೆ' ಎಂದು ವಿಹಿಂಪ ಸಂಘಟನಾ ಪ್ರಧಾನ ಕಾರ್ಯದರ್ಶಿ ದಿನೇಶ್ ಚಂದರ್ ಇಲ್ಲಿ ಹೇಳಿದರು.
ಧರ್ಮ ಆಧಾರಿತ ಮೀಸಲಾತಿ ಸಂವಿಧಾನಕ್ಕೆ ವಿರೋಧವಾದುದು ಎಂದ ಅವರು, ವಿಹಿಂಪ ಸರ್ಕಾರದ ನಡೆ ವಿರುದ್ಧ ಬೃಹತ್ ಜನಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು, ಎಲ್ಲಾ ಹಿಂದೂಗಳನ್ನು ಒಗ್ಗೂಡಿಸಿ ಹೋರಾಟ ನಡೆಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.












Click it and Unblock the Notifications