ನನ್ನ ಕುಟುಂಬ ತೊಡೆ ತಟ್ಟಿ ಹೋರಾಡುತ್ತೆ, ಎಚ್ಡಿಕೆ

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಎಚ್ಡಿಕೆ, ನನ್ನ ವಿರುದ್ದ ಇನ್ನೊಂದು ಡಿನೋಟಿಫಿಕೇಷನ್ ಪ್ರಕರಣ ದಾಖಲಾಗಿದೆ. ಲೋಕಾಯುಕ್ತದಲ್ಲಿ ದೂರು ನೀಡುವುದು ಇತ್ತೀಚಿನ ದಿನಗಳಲ್ಲಿ ಮಕ್ಕಳಾಟಿಕೆಯಾಗಿದೆ. ಕಾನೂನು ಬಾಹಿರವಾಗಿ ನಾನು ಯಾವುದೇ ಕೆಲಸವನ್ನು ಮಾಡಿಲ್ಲ ಮುಂದೆ ಮಾಡುವುದೂ ಇಲ್ಲ ಹೇಳಿಕೆ ನೀಡಿದ್ದಾರೆ.
ಭಾರತೀಯ ಜನತಾಪಕ್ಷದವರು ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿರುವ ದಾಖಲೆ ನನ್ನ ಬಳಿಯಿದೆ. ಬೆನ್ನಿಗೆ ಚೂರಿ ಹಾಕುವ ಸಂಸ್ಕೃತಿ ನನಗಾಗಲಿ ನನ್ನ ಕುಟುಂಬಕ್ಕಾಗಲಿ ಇಲ್ಲ. ಈ ದೇಶದಲ್ಲಿ ಹಗರಣಗಳ ಬಗ್ಗೆ ಮಾತನಾಡುವುದು ವ್ಯರ್ಥ ಎನ್ನುವ ಕಾರಣಕ್ಕಾಗಿ ನಾನು ಕೆಲದಿನಗಳಿಂದ ಸುಮ್ಮನಿದ್ದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ನನ್ನ ಮತ್ತು ನನ್ನ ಕುಟುಂಬದ ವಿರುದ್ದ ಪಿತೂರಿ ನಡೆಸುವುದೇ ಯಡಿಯೂರಪ್ಪ ಅವರ ಸದ್ಯದ ಕೆಲಸ. ಗೌಡರ ಕುಟುಂಬದ ದಾಖಲೆ ಹುಡುಕಲು ಪ್ರಧಾನ ಕಾರ್ಯದರ್ಶಿಯೊಬ್ಬರು ಇದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.












Click it and Unblock the Notifications