ಕುಮಾರ್, ಚೆನ್ನಿಗಪ್ಪ ವಿರುದ್ಧ ಲೋಕಾಯುಕ್ತ ತನಿಖೆ
ಬೆಂಗಳೂರು,
ಜ. 2 : ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಮಾಡಿದ ಆರೋಪ ಹೊರಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಅಂದಿನ ಅರಣ್ಯ ಸಚಿವ ಸಿ ಚೆನ್ನಿಗಪ್ಪ ಅವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಸೋಮವಾರ, ಜ.2ರಂದು ದೂರು ಸಲ್ಲಿಸಲಾಗಿದೆ. ದೂರು ಸ್ವೀಕರಿಸಿರುವ ನ್ಯಾಯಾಧೀಶರು ತನಿಖೆಗೆ ಆದೇಶಿಸಿದ್ದಾರೆ. id="toptextpromo">ಅಪರಾಧ
ಪ್ರಕ್ರಿಯಾ ಸಂಹಿತೆ(ಸಿಆರ್‌ಪಿಸಿ)ಯ ಸೆಕ್ಷನ್ 156(3) ಅಡಿಯಲ್ಲಿ ಮೊದಲನೇ ಆರೋಪಿ ಕುಮಾರಸ್ವಾಮಿ ಮತ್ತು ಎರಡನೇ ಆರೋಪಿ ಚೆನ್ನಿಗಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಫೆ.6ರೊಳಗೆ ತನಿಖೆಯ ವರದಿಯನ್ನು ಸಲ್ಲಿಸಬೇಕೆಂದು ಪೊಲೀಸರಿಗೆ ಲೋಕಾಯುಕ್ತ ನ್ಯಾಯಾಧೀಶ ಸುಧೀಂದ್ರ ಅವರು ಆದೇಶಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಧುಸ್ವಾಮಿ
ಎಂಬುವವರು ದೂರು ದಾಖಲಿಸಿದ್ದು, ತಣಿಸಂದ್ರ ಗ್ರಾಮದಲ್ಲಿ 3.8 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಬೀಳುವ ಕೆಲ ದಿನಗಳ ಹಿಂದೆ 2007ರ ಅಕ್ಟೋಬರ್‌ನಲ್ಲಿ ಡಿನೋಟಿಫೈ ಮಾಡಲು ಕುಮಾರಸ್ವಾಮಿ ಆದೇಶಿಸಿದ್ದರು ಎಂದು ಆರೋಪಿಸಲಾಗಿದೆ.











Click it and Unblock the Notifications