ಯಡ್ಡಿ-ಈಶ್ವರಪ್ಪ ಕದನ, ಗೌಡರಿಗೆ ಅನ್ಯಾಯ:ಜೆಡಿಎಸ್

ಕುವೆಂಪು ಗೀತೆಗಳ ಗಾಯನ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಜೈಲಿಗೆ ಹೋಗಲು ಈಶ್ವರಪ್ಪ ಕಾರಣವೇ ಹೊರತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿಯವರ ಯಾವುದೇ ಪಾತ್ರವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.
ಯಡಿಯೂರಪ್ಪ ಜೈಲಿಗೆ ಹೋದಾಗ ಕುಮಾರಸ್ವಾಮಿಯ ಪಿತೂರಿ ಎಂದು ಹೇಳಲಾಗಿತ್ತು. ಜೆಡಿಎಸ್ ಯಾವುದೇ ವ್ಯಕ್ತಿಯ ವಿರುದ್ಧ ಹೋರಾಟ ನಡೆಸದೆ ಭ್ರಷ್ಟಾಚಾರದ ವಿರುದ್ಧ ಚಳವಳಿ ನಡೆಸಿದೆ ಎಂದರು. ರಾಜ್ಯ ಬಿಜೆಪಿ ಸರಕಾರ ಐದು ವರ್ಷ ಪೂರೈಸಿದರೂ, ಉರುಳಿದರೂ ಜೆಡಿಎಸ್‌ಗೆ ದುಃಖವೂ ಇಲ್ಲ.
ಸಂತೋಷವೂ ಇಲ್ಲ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿಯೂ ಚುನಾವಣೆ ಎದುರಾದರೆ ಅದನ್ನು ಎದುರಿಸಲು ಜೆಡಿಎಸ್ ಸಿದ್ಧವಾಗಿದೆ ಎಂದು ಹೇಳಿದ ಚಲುವರಾಯಸ್ವಾಮಿ, ರಾಜ್ಯದಲ್ಲಿ ಅಡಳಿತ ಯಂತ್ರಾಂಗ ಸಂಪೂರ್ಣ ಕುಸಿದಿದೆ ಎಂದು ದೂರಿದರು.












Click it and Unblock the Notifications