ಆಸ್ಪತ್ರೆಯಲ್ಲಿ ಗೆಟೌಟ್ ಎಂದು ಮಧು ಹೇಳಿದ್ದು ಯಾರಿಗೆ?

ಆದರೆ ಆಸ್ಪತ್ರೆಯಲ್ಲಿ ನಡೆದ ಘಟನೆಯೇ ಬೇರೆ ಎನ್ನುತ್ತಾರೆ ಮಧು. ಅವರ ಮಾತುಗಳಲ್ಲೇ ಕೇಳಿ- ನನ್ನಣ್ಣ ಆಗಾಗ ಬಂದು ಒಂದೆರಡು ಕ್ಷಣ ಮಾತ್ರವಿದ್ದು ಅಪ್ಪನನ್ನು ನೋಡಿಕೊಂಡು ಹೋಗುತ್ತಿದ್ದ. ನಾವು ಆತನಿಗೆ ಬೇಡ. ಅನ್ನಲಿಲ್ಲ. ಆದರೆ ಅದೊಮ್ಮೆ ಇದ್ದಕ್ಕಿದ್ದಂತೆ ನಮ್ಮ ಕುಟುಂಬದ ಖಳನಾಯಕ ಫಾಲಾಕ್ಷಿಯನ್ನು ಐಸಿಯುಗೆ ಕರೆದುಕೊಂಡು ಬಂದ್ಬಿಟ್ಟ. ಆ ವೇಳೆ ನಾನು ಅಲ್ಲಿರಲಿಲ್ಲ. ಮೇಲ್ಮಹಡಿಯಲ್ಲಿ ಅಮ್ಮನ ಆರೈಕೆಯಲ್ಲಿದ್ದೆ. ಅಪ್ಪನ ಬಳಿಯಿದ್ದವರು ನನ್ನಕ್ಕ ಗೀತ ಶಿವರಾಜ್ ಕುಮಾರ್.
ಅಪ್ಪನನ್ನು ನೋಡಿಕೊಂಡು ಹೋಗಲು ಫಾಲಾಕ್ಷಿ ಬಂದಿದ್ದಾನೆ ಎಂದು ನನಗೆ ಸುದ್ದಿ ಮುಟ್ಟಿಸಿದರು. ನಾನು ಅಗತ್ಯವಾಗಿ ರೌದ್ರಾವತಾರ ತಾಳಿದೆ. ಅವನನ್ನು ಚೆನ್ನಾಗಿ ಬಡಿದು, ಹಾಗೇ ಆಸ್ಪತ್ರೆ ಬೆಡ್ ಮೇಲೆ ಮಲಗಿಸಿಬಿಡುವ ಮನಸ್ಥಿತಿಯಲ್ಲಿ ಕೆಳಗೆ ಬಂದೆ. ಆದರೆ ಗೀತಕ್ಕ ತಡೆದರು. ತಾಳ್ಮೆ ಕಳೆದುಕೊಳ್ಳದಂತೆ ತಬ್ಬಿ ಹಿಡಿದರು.
ಅಕ್ಕನ ಮಾತಿಗೆ ಕಟ್ಟುಬಿದ್ದೆ. ಸಾವಕಾಶವಾಗಿ ಬಂದು ಅವನ ಅಂದರೆ ಫಾಲಾಕ್ಷಿಯ ಕತ್ತು ಹಿಡಿದು ಹೊರಗೆ ತಳ್ಳಿದೆ. ಅಲ್ಲೇ ನಿಂತಿದ್ದ ಹಿರಿಯಣ್ಣನ ಕಡೆ ನಾನು ತಿರುಗಿಯೂ ನೋಡಲಿಲ್ಲ. ನಡದಿದ್ದು ಇಷ್ಟು. ಕತ್ತು ಹಿಡಿದು ಹೊರಗೆ ದಬ್ಬಿದ್ದು ಫಾಲಾಕ್ಷಿಯನ್ನೇ ಹೊರತು. ನನ್ನಣ್ಣನನ್ನು ಅಲ್ಲ. ಅಷ್ಟಕ್ಕೂ ಬೆಡ್ ಮೇಲೆ ಮಲಗಿರುವ ಅಪ್ಪನನ್ನು ನೋಡಲು ಬರಬೇಡ ಎಂದು ಹೇಳುವ ಹಕ್ಕು ನನಗೆಲ್ಲಿದೆ? ಎಂದು ಮಧು ಕಹಿ ಘಟನೆಯನ್ನು ಮೆಲುಕು ಹಾಕಿದರು.
ಆಯ್ತು ಇಷ್ಟಕ್ಕೂ ಫಾಲಾಕ್ಷಿಗೆ ಕತ್ತು ಹಿಡಿದು ತಳ್ಳದ್ದೇಕೆ ಎಂಬುದಕ್ಕೆ ಮಧು ಕೊಟ್ಟ ವಿವರಣೆ ಹೀಗಿದೆ: ಮಾಮಾ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಿದ್ದರು. ನಮ್ಮನ್ನು ಗುರುತು ಹಿಡಿಯುವಷ್ಟು ಸುಧಾರಿಸಿದರು. ಈ ಹಂತದಲ್ಲಿ ತಮ್ಮ ಕುಟುಂಬದ ಖಳನಾಯಕ ಫಾಲಾಕ್ಷಿಯನ್ನು ನೋಡಿದರೆ ಅಪ್ ಸೆಟ್ ಆಗುತ್ತಿದ್ದುದ್ದು ಖಂಡಿತ. ಸೋ, ಒಲ್ಲದ ಫಾಲಾಕ್ಷಿಯನ್ನು ನೋಡಿ ಅಪ್ಪ ಕ್ಷುದ್ರರಾಗುವುದು ಬೇಡ ಎಂದೆಣಿಸಿ, ಅವನನ್ನು ಸೀನ್ ನಿಂದ ಹೊರಹಾಕಿದೆವು ಎಂದು ಧೀರ್ಘ ಉಸಿರೆಳೆದುಕೊಂಡರು ಮಧು. (ಮುಂದೆ ಓದಿ ...)












Click it and Unblock the Notifications