ನಾನು ಮತ್ತೆ ಮುಖ್ಯಮಂತ್ರಿ ಆಗೇ ಆಗ್ತೀನಿ: ಯಡಿಯೂರಪ್ಪ

ಗುರುವಾರ ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾವೋದ್ವೇಗದಿಂದ ಮಾತನಾಡಿದ ಯಡಿಯೂರಪ್ಪ, ಯಾವ ತಪ್ಪು ಮಾಡದಿದ್ದರೂ ಸಂಚು ಮಾಡಿ, ನನ್ನನ್ನು ಜೈಲಿಗೆ ಕಳುಹಿಸಲಾಗಿದೆ. ಆದರೆ, ಇದ್ಯಾವುದಕ್ಕೂ ಜಗ್ಗುವುದಿಲ್ಲ. ಮತ್ತೂಮ್ಮೆ ಮುಖ್ಯಮಂತ್ರಿಯಾಗಿಯೇ ತೀರುತ್ತೇನೆ ಎಂದು ಹೇಳಿದರು.
ಕೊಡಬಾರದ ಕಷ್ಟ ಎಲ್ಲ ಕೊಟ್ರಪ್ಪಾ: ದೇಶದಲ್ಲಿ ಯಾವ ಮುಖ್ಯಮಂತ್ರಿಯೂ ಪಡದ ಕಷ್ಟಗಳನ್ನು ನಾನು ಪಟ್ಟಿದ್ದೇನೆ. ನನಗೆ ಕೊಡಬಾರದ ಕಷ್ಟ ಕೊಟ್ಟಿದ್ದಾರೆ. ನನಗೆ ತುಂಬಾ ಜನ ಶತ್ರುಗಳಿದ್ದಾರೆ. ಇಷ್ಟಕ್ಕೂ, ನಾನು ಮಾಡಿದ ತಪ್ಪಾದರೂ ಏನು? ಅಭಿವೃದ್ಧಿಗಾಗಿ ಶ್ರಮಿಸಿದ್ದು ತಪ್ಪೇ ಎಂದು ಅವರು ಭಾವೋದ್ವೇಗದಿಂದ ಸಭಿಕರನ್ನು ಪ್ರಶ್ನಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಾಳೇಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಜ್ಯದ ಜನತೆಯ ಸೇವೆ ಮಾಡಲು ಯಡಿಯೂರಪ್ಪ ಅವರಿಗೆ ಮತ್ತೂಂದು ಅವಕಾಶ ನೀಡಬೇಕು. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ ಮತ್ತೂಮ್ಮೆ ಸಾಗುವಂತಾಗಬೇಕು ಎಂದು ಹೇಳಿದರು.












Click it and Unblock the Notifications