ಬಿಎಸ್ ಯಡಿಯೂರಪ್ಪ ಜನತೆಗೆ 'ಸದಾ'ಕಾಲ ಸಿಎಂ

ರಾಜ್ಯದ ಮೋಟರ್ ಕ್ಯಾಬ್, ಮ್ಯಾಕ್ಸಿ ಕ್ಯಾಬ್ ಮಾಲೀಕರ ಸಂಘ ಏರ್ಪಡಿಸಿದ್ದ ಸಮಾರಂಭದಲ್ಲಿ ಕಾರ್ಯಕ್ರಮದ ನಿರುಪಕರು ಯಡಿಯೂರಪ್ಪ ಅವರನ್ನು 'ನಮ್ಮ ಮುಖ್ಯಮಂತ್ರಿ' ಎಂದು ಮತ್ತೆ ಮತ್ತೆ ಸಂಬೋಧಿಸಿದ ಪ್ರಸಂಗ ಗುರುವಾರ ನಡೆಯಿತು.
ಇದಕ್ಕೆ ಉತ್ತರ ಎಂಬಂತೆ ಮಾತನಾಡಿದ ಯಡಿಯೂರಪ್ಪ, ಅಧಿಕಾರ ಮುಖ್ಯವಲ್ಲ, ಅಧಿಕಾರದಲ್ಲಿದ್ದಾಗ ಮಾಡಿರುವ ಒಳ್ಳೆ ಕೆಲಸಗಳಷ್ಟೆ ಮುಖ್ಯ ಎಂದು ಹೇಳಿದ್ದಾರೆ.
ನಾನು ಶಿಕಾರಿಪುರದ ಶಾಸಕನಾಗಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ. ಸದಾನಂದ ಗೌಡರು ನಮ್ಮ ಮುಖ್ಯಮಂತ್ರಿ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು












Click it and Unblock the Notifications