ಈಶ್ವರಪ್ಪ ಡಿಸಿಎಂ, ಯಡ್ಡಿ ರಾಜ್ಯಾಧ್ಯಕ್ಷಕ್ಕೆ ಸೂತ್ರ?

Yeddyurappa and Eshwarappa
ನವದೆಹಲಿ, ಡಿ.28: ಕೆಎಸ್ ಈಶ್ವರಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕೊಡಿ ಎಂಬ ರಾಜಿ ಸೂತ್ರ ಪಟ್ಟಿ ಹಿಡಿದು ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಈಶ್ವರಪ್ಪ ಅವರು ಕೊರೆವ ಚಳಿಯಲ್ಲಿ ಗಡ್ಕರಿ ಮನೆ ಬಾಗಿಲು ತಟ್ಟಿದ್ದಾರೆ.

ಆದರೆ, ಹೈಕಮಾಂಡ್ ಯಾವ ನಾಯಕರ ಜೊತೆ ಕೂಡಾ ಮಾತುಕತೆ ನಡೆಸಲು ಮುಂದಾಗಿಲ್ಲ ಎಂಬ ಸುದ್ದಿಯಿದೆ. ಈ ನಡುವೆ ಆರೋಪ ಮುಕ್ತರಾಗುವವರೆಗೂ ಯಡಿಯೂರಪ್ಪ ಅವರಿಗೆ ಯಾವುದೇ ಸ್ಥಾನ ಮಾನ ಸಿಗುವುದಿಲ್ಲ ಎಂದು ಈಶ್ವರಪ್ಪ ಪದೇ ಪದೇ ಹೇಳುತ್ತಿದ್ದಾರೆ.

ಯಡ್ಡಿ ಬೆಂಬಲಿಗರ ಸಭೆ: ಇತ್ತ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಯಡಿಯೂರಪ್ಪ ಆಪ್ತರಾದ ಸಚಿವ ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಲಕ್ಷ್ಮಣ ಸವದಿ, ಬಿಪಿ ಹರೀಶ್ ಮುಂತಾದವರು ಸಭೆ ನಡೆಸಿ ಚರ್ಚೆ ಮಾಡಿದ್ದಾರೆ.

ಸಿಎಂ ಸದಾನಂದ ಗೌಡ ಹಾಗೂ ಈಶ್ವರಪ್ಪ ಅವರಲ್ಲದೆ ರಾಜ್ಯದ ಸಂಸದರ ಜೊತೆ ಔತಣಕೂಟದ ನೆಪದಲ್ಲಿ ಹೈಕಮಾಂಡ್ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ. ಆದರೆ, ಸದಾನಂದ ಗೌಡರ ರಾಜಿ ಸೂತ್ರ ಜಾರಿಗೆ ಬರುವುದು ಸಂಕ್ರಾಂತಿಯ ನಂತರ ಎಂಬ ಸತ್ಯ ಲೀಕ್ ಆಗಿದೆ.

ಯಡಿಯೂರಪ್ಪ ಬಣ ಕೂಡಾ ಆಪ್ತ ಜ್ಯೋತಿಷಿಗಳ ಸಲಹೆಯಂತೆ ಸಂಕ್ರಾಂತಿ ತನಕ ಕಾಯಲು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಶುಭ ಸಮಾಚಾರ ಈಗಲೇ ತಿಳಿದರೂ ಸಂಕ್ರಾಂತಿ ನಂತರ ಪಟ್ಟ ದೊರೆಯುವ ಸೂಚನೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+