ತೂಗುಯ್ಯಾಲೆಯಲ್ಲಿ ಜನಾರ್ದನ ರೆಡ್ಡಿ ಜಾಮೀನು
ಹೈದರಾಬಾದ್,
ಡಿ. 28: ಓಬಳಾಪುರಂ ಅಕ್ರಮ ಗಣಿ ಹಗರಣದ ಪ್ರಮುಖ ಆರೋಪಿ, ಮಾಜಿ ಸಚಿವ ಜನಾರ್ದನ ರೆಡ್ಡಿ ನಾಲ್ಕನೆ ಬಾರಿಗೆ ಸಲ್ಲಿಸಿರುವ ಜಾಮೀನು ವಿಚಾರಣೆ ಪೂರ್ಣಗೊಂಡಿದ್ದು ತೀರ್ಪು ಘೋಷಣೆ ದಿನಾಂಕವನ್ನು ಡಿ. 30ಕ್ಕೆ ಮುಂದೂಡಲಾಗಿದೆ. id="toptextpromo">ರೆಡ್ಡಿ
ಜಾಮೀನು ಕುರಿತು ಕೋರ್ಟ್ ನೀಡಲಿರುವ ತೀರ್ಪು ಮಹತ್ವದ್ದಾಗಿದೆ. ಒಂದು ವೇಳೆ ಜಾಮೀನು ನಿರಾಕರಿಸಿದರೆ ರೆಡ್ಡಿಗೆ ಇನ್ನೂ ಆರು ತಿಂಗಳು ಜೈಲುವಾಸವೇ ಗಟ್ಟಿ. ಓಬಳಾಪುರಂ ಅಕ್ರಮ ಗಣಿ ಹಗರಣವನ್ನು ಹೈಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದ್ದು, ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಹಿಂದೇಟು ಹಾಕಿದೆ. id='are-slot-1' class='oiad oi-axt oiadv'> id='top-searched-articles'>ಡಿಸೆಂಬರ್
30ರಂದು ಜಾಮೀನು ದೊರೆತರೆ ರೆಡ್ಡಿ ಜೊತೆಗೆ ಅವರ ಓಬಳಾಪುರಂ ಮೈನಿಂಗ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಬಿವಿ ಶ್ರೀನಿವಾಸ ರೆಡ್ಡಿ ನಾಲ್ಕು ತಿಂಗಳ ಜೈಲುವಾಸದಿಂದ ಹೊರಬರಲಿದ್ದಾರೆ. ಇಲ್ಲದಿದ್ದರೆ ರೆಡ್ಡಿ ಹೊಸ ವರ್ಷದ ಆಚರಣೆಯನ್ನು ಜೈಲಿನಲ್ಲೇ ಮಾಡಬೇಕಾಗಿದೆ.











Click it and Unblock the Notifications