ಉಡುಪಿ ಜಿಲ್ಲಾ ಕಚೇರಿ ರಾಜ್ಯಕ್ಕೇ ಮಾದರಿ

Udupi DC Office
ಉಡುಪಿ, ಡಿ. 26 : ಉಡುಪಿ ಜಿಲ್ಲಾ ಕಚೇರಿ ಸಂಕೀರ್ಣ ಸಂಪೂರ್ಣವಾಗಿ ಕಾಗದ ರಹಿತ ಕಚೇರಿಯಾಗಲಿದೆ. ಅಲ್ಲದೇ 'ರಾಜ್ಯದಲ್ಲಿಯೇ ಪ್ರಥಮ ಸಂಪೂರ್ಣ ಗಣಕೀಕೃತ ಕಚೇರಿ' ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಮಣಿಪಾಲದ ಎಂಡ್ ಪಾಯಿಂಟ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಿಲ್ಲಾ ಕಚೇರಿ ಸಂಕೀರ್ಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

27 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಜಿಲ್ಲಾ ಕಚೇರಿ ಕಟ್ಟಡ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಮಾದರಿಯಾಗಲಿದೆ. ಕಂದಾಯ ಇಲಾಖೆ ಮತ್ತು ಆರ್‌ಟಿಒ ಹೊರತುಪಡಿಸಿ ಉಳಿದೆಲ್ಲವೂ ಜಿಲ್ಲೆಯ ಜನರಿಗೆ ಒಂದೇ ಕಡೆ ಲಭ್ಯವಾಗುತ್ತವೆ ಎಂದರು.

ಜಿಲ್ಲೆಯಲ್ಲಿರುವ ಖಾಲಿ ಹುದ್ದೆಗಳ ಭರ್ತಿ, ಈಗ ಇರುವ ಜಿಲ್ಲಾ ಕಚೇರಿಯ ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಾಣ, ಸರಕಾರೀ ಸಿಬ್ಬಂದಿಗಳಿಗೆ ವಸತಿಗೃಹ, ಮಣಿಪಾಲದಿಂದ ಕೊಳಲಗಿರಿಗೆ ಸೇತುವೆ ಮತ್ತು ಜಿಲ್ಲಾ ಕಚೇರಿಗೆ ವಾಹನಗಳ ಪೂರೈಕೆ, ಈ ಐದು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸಿಎಂ ಸದಾನಂದ ಗೌಡ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಕಾಗದರಹಿತ ಕಚೇರಿಯಾಗಿ ಮೂಡಿ ಬರುತ್ತಿದೆ. ಸರಕಾರ ಇತ್ತೀಚಿಗೆ ನಾಗರಿಕ ಸೇವಾ ಕಾಯಿದೆಯನ್ನು ಅಂಗೀಕರಿಸಿದೆ. ವಾಜಪೇಯಿ ಸಭಾಂಗಣ ಎಂದು ಇಲ್ಲಿನ ಸಭಾಂಗಣಕ್ಕೆ ಹೆಸರು ಇಡುವುದರಿಂದ ಅದರಲ್ಲಿ ಕುಳಿತ ಎಲ್ಲಾ ರಾಜಕಾರಣಿಗಳು ಮತ್ತು ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಸಿಎಂ ಆಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+