ಯುಎಸ್ ಕಾಲ್ ಸೆಂಟರ್ ಮಸೂದೆಗೆ ಭಾರತದ ವಿರೋಧ

ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಈ ಮಸೂದೆ ಸಹಕಾರಿಯಾಗಬಹುದು. ಆದರೆ, ಭಾರತದಲ್ಲಿ ಇದರಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸಬೇಕಾಗಿದೆ.
ಕಾಲ್‌ಸೆಂಟರ್ ಮಸೂದೆಗೆ ಅಮೆರಿಕದ ಕಮ್ಯುನಿಕೇಶನ್ ವರ್ಕರ್ಸ್ ಆಫ್ ಅಮೆರಿಕ(ಸಿಡಬ್ಲ್ಯೂಎ) ಸಂಘಟನೆ ಭಾರೀ ಬೆಂಬಲ ಸೂಚಿಸಿರುವುದು ತಿಳಿದು ಬಂದಿದೆ. ಈ ವಿಷಯವನ್ನು ಆಡಳಿತಾತ್ಮಕ ರೀತಿಯಲ್ಲಿ ಚರ್ಚಿಸಿ ದ್ವಿಪಕ್ಷೀಯ ಮಾತುಕತೆ ನಡೆಸಲು ಸಿದ್ಧತೆ ನಡೆದಿದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ನಿರುಪಮಾ ರಾವ್ ಹೇಳಿದ್ದಾರೆ.
ಭಾರತದ ಐಟಿ ಕ್ಷೇತ್ರದ ಆರ್ಥಿಕ ಭದ್ರತೆ ಕಾಯ್ದುಕೊಳ್ಳುವುದು, ಬಂಡವಾಳ ಹೂಡಿಕೆ, ನಿರುದ್ಯೋಗ ಸಮಸ್ಯೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ನಿರುಪಮಾ ರಾವ್ ಹೇಳಿದ್ದಾರೆ.
ಈ ಮಸೂದೆ ಭಾರತದ ಬಿಪಿಒ ಮೇಲೆ ಋಣಾತ್ಮಕ ಪರಿಣಾಮ ಬೀರಲಿದ್ದು, ಹೆಚ್ಚಿನ ಆರ್ಥಿಕ ಕುಸಿತಕ್ಕೆ ಕಾರಣವಾಗಬಹುದು. ಈ ಮಸೂದೆಯನ್ನು ಈಗಿರುವ ಸ್ವರೂಪದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಸ್ ಕಾಮ್ ಅಧ್ಯಕ್ಷ ಸೋಮ್ ಮಿತ್ತಲ್ ಹೇಳಿದ್ದಾರೆ.
ಯುಎಸ್ ಕಾಲ್ ಸೆಂಟರ್ ಮಸೂದೆ ಉಲ್ಲಂಘಿಸಿ, ಭಾರತದ ಹೊರಗುತ್ತಿಗೆ ಕೇಂದ್ರಗಳ ಬಗ್ಗೆ ಮಾಹಿತಿ ನೀಡದ ಅಮೆರಿಕದ ಸಂಸ್ಥೆಗಳಿಗೆ ಪ್ರತಿ ದಿನಕ್ಕೆ 10,000 ಡಾಲರ್ ದಂಡ ವಸೂಲಿ ಮಾಡಲು ಅಮೆರಿಕದ ಆಡಳಿತ ಸಜ್ಜಾಗಿದೆ.
ಭಾರತ ಹಾಗೂ ಫಿಲಿಫೈನ್ಸ್ ದೇಶಗಳಲ್ಲಿರುವ ಅಮೆರಿಕ ಅವಲಂಬಿತ ಕಾಲ್ ಸೆಂಟರ್ ಗಳ ಮೇಲೆ ಅಮೆರಿಕದ ಕಾಲ್ ಸೆಂಟರ್ ಮಸೂದೆ ಅಥವಾ ಹೊರಗುತ್ತಿಗೆ ವಿರೋಧಿ ಕಾಯ್ದೆ ಮುಖ್ಯ ಟಾರ್ಗೆಟ್ ಆಗಿದೆ. ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಿದೆ. ಸ್ಥಳೀಯರಿಗೆ ಉದ್ಯೋಗ ನೀಡಲು ಈ ಮಸೂದೆ ಅತ್ಯಗತ್ಯ ಎಂದು ಆಮೆರಿಕ ಹೇಳಿಕೊಂಡಿದೆ.












Click it and Unblock the Notifications