ಸಮಾಧಿಯ ಬಳಿ ಗಗನಸಖಿ ಮೇಲೆ ಸಾಮೂಹಿಕ ಅತ್ಯಾಚಾರ
ಕೈರೊ,
ಡಿ.23: ಸಮಾಧಿ ಘಾಟ್ ಬಳಿ ಬಾಯ್ ಫ್ರೆಂಡ್ ಜತೆ ಕಾರಿನಲ್ಲಿದ್ದ 23 ವರ್ಷದ ಗಗನಸಖಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ. ಘಟನೆಯ ನಂತರ ಪೊಲೀಸರು ಆರೋಪಿಗಳಿಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದು, ಇಬ್ಬರೂ ಆಪರಾಧ ಹಿನ್ನೆಲೆಯುಳ್ಳವರು ಎಂದು ತಿಳಿಸಿದ್ದಾರೆ. id="toptextpromo">ಈಜಿಪ್ಟಿನ
ಗಗನಸಖಿ ಎಚ್ಎಂ ಮೊಹಮದ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ 25 ವರ್ಷದ ಬಾಯ್ ಫ್ರೆಂಡ್ ಜತೆ ಕಾರಿನಲ್ಲಿದ್ದಾಗ ಆರೋಪಿಗಳಿಬ್ಬರೂ ಮೊದಲು ಚಾಕು ತೋರಿಸಿ, ಬೆದರಿಕೆಯೊಡ್ಡಿದ್ದರು. ಬಳಿಕ ನನ್ನ ಬಾಯ್ ಫ್ರೆಂಡ್ ನನ್ನು ಕಟ್ಟಿಹಾಕಿ, ನನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಆರೋಪಿಗಳು
ನನ್ನ ಕಾರಿನ ಬಳಿ ಬಂದವರೇ ಕಿಟಕಿ ಗಾಜು ಪುಡಿ ಪುಡಿ ಮಾಡಿ, ಇಗ್ನಿಶಿಯನ್ ಕೀ ಕಸಿದುಕೊಂಡರು. ಬಳಿಕ ನನ್ನ ಬಾಯ್ ಫ್ರೆಂಡ್ ನನ್ನು ಹೊರಗೆಳೆದು ಇಬ್ಬರೂ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು. ಅತ್ಯಾಚಾರ ನಡೆಸಿದ ನಂತರ ದುಷ್ಕರ್ಮಿಗಳು ನನ್ನ ಬಳಿಯಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿಸಿದ್ದಾರೆ. ನನ್ನ ಬಾಯ್ ಫ್ರೆಂಡ್ ನ ದುಬಾರಿ ಮೊಬೈಲ್, ಲ್ಯಾಪ್‌ಟಾಪ್ ಅನ್ನೂ ಕಿತ್ತುಕೊಂಡು ಹೋಗಿದ್ದಾರೆ' ಎಂದು ಗಗನಸಖಿ ಮೊಹಮದ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅಲವತ್ತುಕೊಂಡಿದ್ದಾರೆ.











Click it and Unblock the Notifications