ಶಾಸಕ ಸಿಟಿ ರವಿ ಮೇಲೆ ಲೋಕಾಯುಕ್ತ ಪೊಲೀಸ್ FIR

ಭ್ರಷ್ಟಾಚಾರ ಕಾಯ್ದೆ 13(1), ಐಪಿಸಿ ಸೆಕ್ಷನ್ 420 ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಲೋಕಾಯುಕ್ತ ಸಂಸ್ಥೆ ಮುಂದಾಗಿದೆ.
ಚಿಕ್ಕಮಗಳೂರಿನ ಕೆಎಚ್‌ಬಿ ಕಾಲೋನಿಯ ತೃತೀಯ ಹಂತದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡಿನಿಂದ ಮೂರು ನಿವೇಶನ ಪಡೆದುಕೊಂಡಿರುವ ಅಕ್ರಮದ ಬಗ್ಗೆ ಚಿಕ್ಕಮಗಳೂರು ನಗರ ಪಾಲಿಕೆ ಸದಸ್ಯ ದೇವಿಪ್ರಸಾದ್ ಅವರು ಆರ್ ಟಿಐ ಅರ್ಜಿ ಮೂಲಕ ವಿವರಗಳನ್ನು ಪಡೆದು ಲೋಕಾಯುಕ್ತ ಕೋರ್ಟ್ ಗೆ ಸಲ್ಲಿಸಿದ್ದರು.
ಸಿಟಿ ರವಿ ಹಾಗೂ ಅವರ ಪತ್ನಿ ಸೇರಿದಂತೆ 11 ಜನರ ವಿರುದ್ಧ ನೀಡಿರುವ ದೂರಿನ ಪರಿಶೀಲಿಸಿದ ನ್ಯಾ.ಸುಧೀಂದ್ರ ರಾವ್ ಅವರು ನೀಡಿದ ಆದೇಶದ ಮೇರೆಗೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.












Click it and Unblock the Notifications