ನ್ಯಾಯಮೂರ್ತಿ ಎನ್ ಕೆ ಸೋಧಿ ರಾಜ್ಯದ ನೂತನ ಲೋಕಾಯುಕ್ತ
ಬೆಂಗಳೂರು,
ಡಿ.21: ನೂತನ ಲೋಕಾಯುಕ್ತ ನೇಮಕ ವಿಚಾರದಲ್ಲಿ ರಾಜ್ಯಪಾಲ ಭಾರದ್ವಾಜ್ ಅವರದೇ ಅಂತಿಮ ನಗೆಯಾಗಿದೆ. ಕಳಂಕಿತ ನ್ಯಾಯಮೂರ್ತಿ ಎಸ್.ಆರ್. ಬನ್ನೂರುಮಠ ಅವರನ್ನು ಹೊಸ ಲೋಕಾಯುಕ್ತ ಪೀಠದಲ್ಲಿ ಕೂಡಿಸಲು ಬಿಲ್ಕುಲ್ ಒಪ್ಪದೇ ಹೋದ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ತೀವ್ರ ಮುಜಗರವನ್ನುಂಟುಮಾಡಿದ್ದರು. id="toptextpromo">ಮುಖ್ಯಮಂತ್ರಿ
ಸದಾನಂದ ಗೌಡರೂ ನೇರವಾಗಿ ರಾಜ್ಯಪಾಲರ ಜತೆ ಸಂಘರ್ಷಕ್ಕೆ ಇಳಿದಿದ್ದರು. ಆದರೆ ಕೊನೆಗೆ ತಮ್ಮ ಪಟ್ಟು ಸಡಿಲಿಸಿ 'ಆಯ್ತು ಬೇರೆಯವರ ಹೆಸರನ್ನು ಸೂಚಿಸುತ್ತೇವೆ. ಒಪ್ಪಿಗೆ ನೀಡಿ' ಎಂಬ ಸಂದೇಶವನ್ನು ಸದಾನಂದ ಗೌಡರು ನಿನ್ನೆಯಷ್ಟೇ ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>ಮೂಲಗಳ
ಪ್ರಕಾರ ಇದೀಗ ಬಿಜೆಪಿ ರಾಷ್ಟ್ರೀಯ ನಾಯಕ ಎಲ್ ಕೆ ಅಡ್ವಾಣಿ ಮಧ್ಯಪ್ರವೇಶಿದ್ದು, ನಾಳೆ ಮೇಲ್ಮನೆ ಚುನಾವಣೆ ಬಳಿಕ ಲೋಕಾಯುಕ್ತ ಸ್ಥಾನಕ್ಕೆ ಹೊಸಬರನ್ನು ತರುವ ಪ್ರಯತ್ನ ನಡೆದಿದೆ. ರಾಜ್ಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ಕೆ. ಸೋಧಿ ಅವರ ಹೆಸರು ಬಹುತೇಕ ಅಂತಿಮಗೊಂಡಿದ್ದು, ಮುಂದಿನ ಲೋಕಾಯುಕ್ತರಾಗಿ ಸೋಧಿ ಅವರು ಈ ವಾರಾಂತ್ಯ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.











Click it and Unblock the Notifications