ರಷ್ಯಾದಲ್ಲಿ ಗೀತೆಗೆ ನಿಷೇಧ, ಸಂಸತ್ತಿನಲ್ಲಿ ಕೋಲಾಹಲ

Ban on Bhagwad Gita
ನವದೆಹಲಿ, ಡಿ.19: ರಷ್ಯದ ಸೈಬೀರಿಯಾ ಕೋರ್ಟ್ ಭಗವದ್ಗೀತೆ ನಿಷೇಧ ಹೇರಿರುವ ಪ್ರಕರಣ ಸೋಮವಾರ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದೆ. ನಿಷೇಧ ಸುದ್ದಿ ಹರಡುತ್ತದ್ದಂತೆ ರಷ್ಯಾದ ರಾಯಭಾರ ಕಚೇರಿ ಎದುರು ಇಸ್ಕಾನ್ ನ ಸಾಧು ಸಂತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ರಷ್ಯದ ಜೊತೆಗೆ ಈ ಬಗ್ಗೆ ಸರಿಯಾದ ರೀತಿಯಲ್ಲಿ ವ್ಯವಹರಿಸಿ ಸ್ಪಷ್ಟನೆ ಪಡೆಯುವಂತೆ ಅರ್ ಜೆಡಿ ಸಂಸದ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವು ಸಂಸತ್ ಸದಸ್ಯರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಷ್ಯದಲ್ಲಿ ಭಗವದ್ಗೀತೆಯನ್ನು ಕಾನೂನುಬದ್ಧವಾಗಿ ನಿಷೇಧಿಸುವ ಬಗ್ಗೆ ಸೈಬೀರಿಯಾದ ಟೊಮಸ್ಕ್ ಕೋರ್ಟ್‌ನಲ್ಲಿ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.

ಭಗವಂತ ಕೃಷ್ಣನಿಗಾಗುವ ಯಾವುದೇ ಬಗೆಯ ಅವಮಾನವನ್ನು ಸಹಿಸಲಾಗದು. ಇಸ್ಕಾನ್ ಸಂಸ್ಥಾಪಕ ಸ್ವಾಮಿ ಪ್ರಭುಪಾದ ಅವರು ರಚಿಸಿರುವ ಭಗವದ್ಗೀತೆಯನ್ನು ರಷ್ಯಾ ಭಾಷೆಗೆ ಭಾಷಾಂತರ ಗೊಳಿಸಲಾಗಿದೆ.

ಆದರೆ, ಈ ಸಾಹಿತ್ಯ ಉಗ್ರವಾದವನ್ನು ಬಿತ್ತುತ್ತಿದೆ. ಸಾಮಾಜಿಕ ಸಾಮರಸ್ಯ ಕೆಡಿಸುತ್ತದೆ ಎಂದು ಆರೋಪಿಸಿ ರಷ್ಯದಲ್ಲಿ ನಿಷೇಧಿಸಬೇಕೆಂದು ಕೋರಲಾಗಿದೆ.

ರಷ್ಯದಲ್ಲಿನ ಹಿಂದೂಗಳ ರಕ್ಷಣೆ: ಹಿಂದೂ ಧಾರ್ಮಿಕ ಹಕ್ಕು ರಕ್ಷಣೆಯಲ್ಲಿ ಭಾರತೀಯ ರಾಯಭಾರ ಕಚೇರಿ ಮುಂದಾಗಬೇಕು ಎಂದು ಶಿವಸೇನೆ, ಬಿಜೆಪಿ, ಆರ್ ಜೆ ಡಿ, ಬಿಎಸ್ ಪಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರಸ್ ಪಕ್ಷದವರು ರಷ್ಯದ ಕ್ರಮವನ್ನು ವಿರೋಧಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+