ಯಲಹಂಕ ಶಾಸಕ ವಿಶ್ವನಾಥ್ ಮನೆಯಲ್ಲಿ 5 ಕೆಜಿ ಚಿನ್ನ

ಬೆಂಗಳೂರು ಲೋಕಾಯುಕ್ತ ಎಸ್ಪಿ ಶಿವಶಂಕರ್ ಮತ್ತು ಸಹಾಯಕ ಎಸ್ಪಿ ಗಿರೀಶ್ ನೇತೃತ್ವದ ತಡ ಈ ದಾಳಿ ಕೈಗೊಂಡಿದೆ. ಸಂಜೆವರೆಗೂ ದಾಳಿ ಮುಂದುವರಿಯುವ ಲಕ್ಷಣಗಳಿವೆ.
ವಿಶ್ವನಾಥ್ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಲೋಕಾಯುಕ್ತ ದಾಳಿ ನಡೆದಿದೆ. ವಿಶ್ವನಾಥ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಂಗಳೂರು ಗ್ರಾಮಾಂತರ ವಿಭಾಗದ ಯಲಹಂಕ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ.
ಯಲಹಂಕ ಮತ್ತು ಹೆಬ್ಬಾಳದಲ್ಲಿರುವ ಅವರ ಕಚೇರಿಗಳ ಮೇಲೆಯೂ ದಾಳಿ ನಡೆದಿದೆ. ದಾಖಲೆ ಪತ್ರಗಳು, ಚಿನ್ನಾಭರಣಗಳು, ಬ್ಯಾಂಕ್ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.












Click it and Unblock the Notifications