ಕೈಗಾ ವಿರುದ್ಧದ ಕೂಗಿಗೆ ಸ್ವರ್ಣವಲ್ಲಿ ಶ್ರೀ ಬೆಂಬಲ

Kaiga Affected People Dharna Swarnavalli Mutt Support
ಕಾರವಾರ, ಡಿ 18: ಕೈಗಾ ಅಣು ವಿದ್ಯುತ್ ಸ್ಥಾವರದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಗ್ರಾಮಸ್ಥರು ಹಮ್ಮಿಕೊಂಡಿರುವ ಪ್ರತಿಭಟನೆ 13ನೇ ದಿನಕ್ಕೆ ತಲುಪಿದೆ. ಕೈಗಾ ಆಸುಪಾಸಿನಲ್ಲಿ ಆತಂಕದಿಂದ ದಿನದೂಡುತ್ತಿರುವ ಗ್ರಾಮಸ್ಥರು ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಿ ಸೂಕ್ತ ಸೌಕರ್ಯ ಕಲ್ಪಿಸಿ ಎಂದು ಬೇಡಿಕೆಯಿಟ್ಟಿದ್ದಾರೆ.

ಈ ಪ್ರತಿಭಟನೆಯಲ್ಲಿ ಸ್ವರ್ಣವಲ್ಲಿ ಮಠದ ಶ್ರೀ ಶಂಕರಾಚಾರ್ಯ ಗಂಗಾದರೇಂದ್ರ ಸರಸ್ವತಿ ಸ್ವಾಮೀಜಿ ಪಾಲ್ಗೊಂಡು ಗ್ರಾಮಸ್ಥರಿಗೆ ಬೆಂಬಲ ನೀಡಿದ್ದಾರೆ. ಇಲ್ಲಿನ ಜನರ ಆರೋಗ್ಯಕ್ಕೆ ಸ್ಥಾವರದಿಂದ ಅಪಾಯವುಂಟಾಗಿದ್ದು ಸರಕಾರವು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ವರ್ಣವಲ್ಲಿ ಸ್ವಾಮೀಜಿ ಆಗ್ರಹಿಸಿದ್ದಾರೆ.

ಏನಿದು ಪ್ರತಿಭಟನೆ: ಕೈಗಾ ಅಣುಸ್ಥಾವರದಿಂದ ಐದು ಕಿ.ಮೀ. ಆಸುಪಾಸಿನಲ್ಲಿರುವ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆಯಿದು. ಕೈಗಾ ಸ್ಥಾವರದ ಐದು ಕಿ.ಮೀ. ವ್ಯಾಪ್ತಿಯ ಹರ್ಟುಗಾ, ಬಳಸೆ, ಹರೂರು, ಕುಚೇಗಾರ ಮತ್ತು ಸುಳಗೇರಿ ಬಳಸೆ ಗ್ರಾಮಸ್ಥರು ಆತಂಕದಿಂದ ದಿನದೂಡುತ್ತಿದ್ದಾರೆ.

ಇಲ್ಲಿನ ಗ್ರಾಮಸ್ಥರಲ್ಲಿ ಕೆಲವರಿಗೆ ಕ್ಯಾನ್ಸರ್, ತುರಿಕೆ, ಅಂಗವ್ಯಕಲ್ಯ ಮುಂತಾದ ಹಲವು ರೋಗಗಳು ಆರಂಭವಾಗಿವೆ. ಇದಕ್ಕೆ ಕೈಗಾ ಅಣುಸ್ಥಾವರವೇ ಕಾರಣವೆಂದು ಹೇಳಲಾಗಿದೆ. ಇಲ್ಲಿನ ಕೃಷಿಗೂ ಹಾನಿಯಾಗಿದೆ. ಭತ್ತದ ಇಳುವರಿ ಕಡಿಮೆಯಾಗಿದೆ. ನೀರು ಕುಡಿಯಲು ಯೋಗ್ಯವಾಗಿಲ್ಲ.

2000ನೇ ವರ್ಷದಲ್ಲಿ ಆರಂಭವಾದ ಅಣುವಿದ್ಯುತ್ ಸ್ಥಾವರದ ನಾಲ್ಕು ಘಟಕಗಳಿಂದ ಇಲ್ಲಿನ ಪರಿಸರ, ಜನರ ಆರೋಗ್ಯಕ್ಕೆ ಹಾನಿಯಾಗಿದೆ. ಈಗ ಇಲ್ಲಿ ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು ಇನ್ನೆರಡು ಘಟಕಗಳನ್ನು ನಿರ್ಮಿಸುವ ಯೋಜನೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+