ಶ್ರೀರಾಮುಲು ಯು ಟರ್ನ್, ಯಡ್ಡಿ ಸಿಎಂ ಆದರೆ ಓಕೆ
ಗದಗ,
ಡಿ 17: ಸ್ವಾಭಿಮಾನಿ ಶ್ರೀರಾಮುಲು ಅವರ ಬಿಜೆಪಿ ಮೇಲಿನ ಸಿಟ್ಟು ದಿನ ಹೋದಂತೆ ತಣ್ಣಗಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಸಿಎಂ ಸ್ಥಾನಕ್ಕೆ ಬಂದರೆ ನನ್ನದೇನೂ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿ ಬಿಜೆಪಿ ಪಾಳಯದಲ್ಲಿ ಗೊಂದಲ ಮೂಡಿಸಿದ್ದಾರೆ. id="toptextpromo">ರಾಜ್ಯದಲ್ಲಿ
ಲಿಂಗಾಯಿತ ಸಮುದಾಯ ಬಹು ದೊಡ್ಡದು. ಆ ಸಮುದಾಯದ ಮುಖಂಡರಾದ ಯಡಿಯೂರಪ್ಪ ಅವರು ಮತ್ತೆ ಆ ಸ್ಥಾನಕ್ಕೆ ಬಂದರೆ ನನ್ನದೇನೂ ಆಕ್ಷೇಪಣೆ ಇಲ್ಲ. ರಾಜ್ಯದ ಸಂಸದರು ಯಡಿಯೂರಪ್ಪ ಬೆಂಬಲಿಸಿ ಬಿಜೆಪಿ ಹೈಕಮಾಂಡ್ ಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆ ಮನವಿ ಪತ್ರದಲ್ಲಿ ನನ್ನ ಸಹೋದರಿ ಶಾಂತಾ ಮತ್ತು ರಾಯಚೂರು ಸಂಸದ ಸಣ್ಣಫಕೀರಪ್ಪ ಕೂಡಾ ಸಹಿ ಮಾಡಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ ಎಂದು ಪಕ್ಷೇತರ ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರಮುಖವಾಗಿ
ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡಿಸಿದ್ದೇ ಯಡಿಯೂರಪ್ಪ. ಹೀಗಾಗಿ ಸದ್ಯ ಅವರು ಮುಖ್ಯಮಂತ್ರಿ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದರಲ್ಲಿ ತಪ್ಪೇನಿದೆ? ಪಕ್ಷ ಬೆಳೆಸಿರುವ ಯಡಿಯೂರಪ್ಪ ಅವರಿಗೆ ದೊಡ್ಡ ಸ್ಥಾನಮಾನ ಸಿಕ್ಕು ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಶ್ರೀರಾಮುಲು ನೀಡಿರುವ ಹೇಳಿಕೆ ಮುಂದಿನ ರಾಜಕೀಯ ಬದಲಾವಣೆಯ ಮುನ್ಸೂಚನೆಯೇ?











Click it and Unblock the Notifications