ಟೆಕ್ಕಿ ಪತಿ ಕಿರುಕುಳ ಸಹಿಸದೆ ಪತ್ನಿ ಸೂಸೈಡ್

ಪತ್ನಿಗೆ ಕಿರುಕುಳ ನೀಡಿ, ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಪತಿ ಹರಿಕೃಷ್ಣ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮೃತಪಟ್ಟ ಪತ್ನಿ ನೀಲಿಮಾ ಬರೆದಿಟ್ಟಿರುವ ಡೆತ್ ನೋಟ್ ಆಧಾರದಿಂದ ಹರಿಕೃಷ್ಣ ಮೇಲೆ ಐಪಿಸಿ ಸೆಕ್ಷನ್ 304 ಬಿ ಅನ್ವಯ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ ಐ ಕೆ ಪ್ರದೀಪ್ ಹೇಳಿದ್ದಾರೆ.
ಕುಕಟ್ಪಲ್ಲಿನಲ್ಲಿ ನೆಲೆಸಿದ್ದ ಈ ಕುಟುಂಬದಲ್ಲಿ ಜಗಳ ಸಾಮಾನ್ಯವಾಗಿತ್ತು. ರಾತ್ರಿ ವೇಳೆ ಹೆಂಡತಿಯನ್ನು ನಾಯಿಗೆ ಬಡಿದಂತೆ ಬಡಿಯುತ್ತಿದ್ದ ಪತಿ, ತನ್ನ ಮಾನಸಿಕ ಒತ್ತಡ ತೀರಿಸಿಕೊಳ್ಳಲು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ವರದಕ್ಷಿಣೆ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಡೆತ್ ನೋಟ್ ನಿಂದ ತಿಳಿದು ಬಂದಿದೆ.
ಸಾಯುವ ಮುನ್ನ: ಸಾಯುವ ಮುನ್ನ ರಾತ್ರಿ 10.30ರ ವೇಳೆಗೆ ನೀಲಿಮಾ ತನ್ನ ತಂದೆ ರಾಮಕೃಷ್ಣ ಅವರಿಗೆ ಕರೆ ಮಾಡಿ, ತನ್ನ ಗೋಳಿನ ಕಥೆ ಹೇಳಿ ಅತ್ತಿದ್ದಾಳೆ. ಆದರೆ, ಅಸಹಾಯಕರಾದ ವೃದ್ಧ ಪೋಷಕರು ಆಕೆಗೆ ಫೋನಲ್ಲೇ ಸಮಾಧಾನ ಹೇಳಿ ಸುಮ್ಮನಾಗಿದ್ದಾರೆ.
ಅದರೆ, ನಂತರ ತನ್ನ ಕೋಣೆಗೆ ತೆರಳಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರಿಕೃಷ್ಣ ಅವರ ಮೇಲೆ ನಿಲೀಮಾ ಪೋಷಕರು ದೂರು ನೀಡಿದ್ದು, ತನಿಖೆ ಮುಂದುವರೆದಿದೆ.












Click it and Unblock the Notifications