ಕೋಡಿಮಠ ಶ್ರೀಗಳೊಂದಿಗೆ ಈಶ್ವರಪ್ಪ ರಹಸ್ಯ ಭೇಟಿ
ಹಾಸನ,
ಡಿ. 15 : ಸದ್ಯಕ್ಕೆ ನೀವು ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕೋಡಿಮಠ ಶ್ರೀಗಳಿಂದ ಯಡಿಯೂರಪ್ಪ ಮಂಗಳಾರತಿ ಮಾಡಿಸಿಕೊಂಡು ಬಂದ ನಂತರ, ಮುಖ್ಯಮಂತ್ರಿ ಗಾದಿಯ ಕನಸು ಕಾಣುವವರಲ್ಲಿ ಮುಂಚೂಣಿಯಲ್ಲಿರುವ ಕೆಎಸ್ ಈಶ್ವರಪ್ಪ ಅವರು ಹಾಸನ ಜಿಲ್ಲೆಯಲ್ಲಿರುವ ಕೋಡಿಮಠಕ್ಕೆ ರಹಸ್ಯ ಭೇಟಿ ನೀಡಿದ್ದಾರೆ. id="toptextpromo">ತಾಳೆಗರಿ
ಭವಿಷ್ಯ ನುಡಿಯುವುದರಲ್ಲಿ ಸಿದ್ಧಹಸ್ತರಾಗಿರುವ ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಮಾತುಕತೆ ನಡೆಸಿದ್ದಾರೆ. ಏನೇನು ಮಾತು ನಡೆಸಿದರು ಎಂಬುದು ಸದ್ಯಕ್ಕೆ ನಿಗೂಢ. id='are-slot-1' class='oiad oi-axt oiadv'> id='top-searched-articles'>ಈ
ಭೇಟಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ. ಇದೊಂದು ಸೌಹಾರ್ದಯುತ ಭೇಟಿ ಮಾತ್ರ. ಇಲ್ಲಿ ಯಾವುದೂ ರಹಸ್ಯವಿಲ್ಲ ಎಂದು ಈಶ್ವರಪ್ಪ ಖಂಡಿತ ಹೇಳುತ್ತಾರೆಂಬುದು ರಾಜಕೀಯ ಪಂಡಿತರ ಅಂಬೋಣ. ಕೆಲ ದಿನಗಳ ಹಿಂದೆ ಯಡಿಯೂರಪ್ಪ ಕೂಡ ಶ್ರೀಗಳನ್ನು ಭೇಟಿ ಮಾಡಿ ನಿರಾಶರಾಗಿ ಬಂದಿದ್ದರು. ಇಷ್ಟಾದರೂ ಅವರು ತಮ್ಮ ಯತ್ನವನ್ನು ಬಿಟ್ಟಿಲ್ಲ ಎಂಬುದಕ್ಕೆ ಬಿಜೆಪಿ ಸಂಸದರ ಮೂಲಕ ಅಡ್ವಾಣಿಗೆ ಪತ್ರ ನೀಡಿಸಿರುವುದಕ್ಕೆ ಸಾಕ್ಷಿ.











Click it and Unblock the Notifications