ಬೆಂಗಳೂರು ಕಸ ಗುಡಿಸಲು ಮುಂದಾದ ಶಂಕರಲಿಂಗೇ ಗೌಡರ ತುರ್ತುಗಮನಕ್ಕೆ

ಶಂಕರಲಿಂಗೇಗೌಡರೇ, ನೀವೂ ಬೆಂಗಳೂರಿನ ಪುರಾತನ ನಿವಾಸಿ ಎಂಬುದನ್ನು ಬಲ್ಲೆವು. ಇಂತಿಪ್ಪ ನೀವು ಅನಾದಿ ಕಾಲದಿಂದಲೂ ಬೆಂಗಳೂರನ್ನು ಬೀದಿ ಬೀದಿಗೆ, ಗಲ್ಲಿ ಗಲ್ಲಿಗೆ, ಕೊನೆಗೆ ಮನೆ ಮನೆಗೆ ಕಾಡುತ್ತಿರುವ ಅತಿ ಸಾಮಾನ್ಯ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಂಡಿರುವುದು ತುಂಬಾ ಸಂತೋಷದ ವಿಚಾರ.
ಶಂಕರಲಿಂಗೇಗೌಡರೇ, ನಿಮಗೆ ಗೊತ್ತಾ! ಏನು ನೀವು garbage ಅಂತ ಕರೀತೀರಿ ಅವು ನಿಜಕ್ಕೂ garbageಗಳೇ ಅಲ್ಲ ಸ್ವಾಮಿ. ಅವು ನಮ್ಮ ನಮ್ಮ ಬಡಾವಣೆಗಳ land markಗಳು ಸ್ವಾಮಿ. ಅಂದರೆ ಇಷ್ಟೊತ್ತಿಗಾಗಲೆ ಪರಿಸ್ಥಿತಿಯ ಭೀಕರತೆ ನಿಮಗೆ ಇದೊಂದರಿಂದಲೇ ಅರಿವಾಗಿರಬೇಕು. ನೋಡಿ ಆದರೂ ಒಂದೇ ಒಂದನ್ನು ಉದಾಹರಣೆಗೆ ಅಂತ ಹೇಳ್ತೀವಿ.
ಶಂಕರಲಿಂಗೇಗೌಡರೇ, ನೀವು ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ಲಿಗೆ (ನಿಜಾರ್ಥದಲ್ಲಿ ಬೆಂಗಳೂರಿನ ಹೆಗ್ಗುರುತು) ಪಶ್ಚಿಮ ದಿಕ್ಕಿನಿಂದ ಬರುವಾಗ ಬಸ್ ಸ್ಟಾಪ್ ಒಂದು ಕಾಣಿಸುತ್ತದೆ. ಅದಕ್ಕೂ ಮುನ್ನ ಒಂದು ಎಡ ತಿರುವು ಇದೆ. ಆ ಕಡೆಗೆ ನೀವು ಹೆಜ್ಜೆ ಹಾಕಿದರೆ (ನಿಮಗೆ ಸಾಧ್ಯವಾದರೆ ಹೆಜ್ಜೆ ಹಾಕಿ. ಇಲ್ಲವಾದರೆ ದೂರದಿಂದಲೇ ಮೂಗು ಮುಚ್ಚಿಕೊಂಡು ಪರಾಂಬರಿಸಿ ಸಾಕು!) ಅಲ್ಲೊಂದು land mark ನಿಮಗೆ ಗೋಚರಿಸುತ್ತದೆ. ಅದೇ ಸ್ವಾಮಿ garbage. ಇದು ಅನಾದಿಕಾಲದಿಂದಲೂ ಇಲ್ಲಿ ಠಿಕಾಣಿ ಹೂಡಿದ್ದು, ಈ ಜಾಗ ನನಗೇ ಸೇರುತ್ತದೆ ಎಂದು ಹಕ್ಕು ಸ್ಥಾಪಿಸಿದೆ, ಅದು ಬೇರೆ ಮಾತು.
ಯಾರು ಯಾರೋ ಮಹಾನುಭಾವರು, 'ಸತ್ಯ'ಸಂತರು ಇದೇ ಬಡಾವಣೆಯಲ್ಲಿ ಬೀಡುಬಿಟ್ಟಿದ್ದು, ಈ land mark ಅನ್ನು ವಕ್ಕಲೆಬ್ಬಿಸುವ ಕೆಲಸಕ್ಕೆ ಕೈ ಹಾಕಿ ಕೈ ಎಲ್ಲ 'ಗಲೀಜು' ಮಾಡಿಕೊಂಡಿದ್ದಾರೆ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೈತೊಳೆದುಕೊಂಡೂ ಹೋಗಿದ್ದಾರೆ. ಸೋ ನೀವು ವಸಿ ಟ್ರೈ ಮಾಡಿ. ಏನಿಲ್ಲ ಇಲ್ಲಿ ಆಜನ್ಮ ಸಿದ್ಧ ಹಕ್ಕು ಎಂದು ಪ್ರತಿಷ್ಠಾಪಿಸಿರುವ ಈ ಒಂದು ಕಸದ ಗುಡ್ಡೆಯನ್ನು ಎಬ್ಬಿಸಿ, ಸ್ವಚ್ಛಗೊಳಿಸಿ ಸಾಕು. ಮುಂದಿನ ಕೆಂಪೇಗೌಡ ಪ್ರಶಸ್ತಿಯನ್ನು ಮತ್ತೊಮ್ಮೆ ನಿಮಗೇ ಕೊಡಿಸೋಣ.
ಇನ್ನೂ ಸಾಕಷ್ಟು ವಿಷಯಗಳಿವೆ. ಮುಖ್ಯವಾಗಿ ಬೀದಿ ಕಸ ಗುಡಿಸುವವರು ಮನೆ ಮಂದಿಯ ಜೇಬಿಗೆ ಕೈಹಾಕುವ ಅಂದರೆ ತಿಂಗಳ ವಸೂಲಿ ದಂಧೆ ಬಗ್ಗೆ ನಿಮಗೇ ಗೊತ್ತಿರುವ ವಿಷಯಗಳನ್ನು ಮತ್ತೆ ನಿಮಗೆ ಜ್ಞಾಪಿಸಿಕೊಡುವ ಸಂಪೂರ್ಣ ಲೆಕ್ಕಾಚಾರದ ಮಾತು ಮುಂದಿನ ಭೇಟಿಯಲ್ಲಿ ಇಟ್ಟುಕೊಳ್ಳೋಣ. till then take care of our beloved 'land marks aka garbages'.












Click it and Unblock the Notifications