ಜನಾ ರೆಡ್ಡಿ ಜಾಮೀನು ಭವಿಷ್ಯ ಇಂದು ನಿರ್ಧಾರ
ಹೈದರಾಬಾದ್,
ಡಿ. 14: ಓಬುಳಾಪುರಂನಲ್ಲಿ ಜನಾರ್ದನ ರೆಡ್ಡಿಗೆ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಜೈಲುವಾಸವೂ ಅನುಭವಿಸಿದ ಹಿರಿಯ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ ಅವರ ವಿರುದ್ಧ 15 ಪುಟಗಳ ಪೂರಕ ಆರೋಪಪಟ್ಟಿ ದಾಖಲಿಸಲು ಸಿಬಿಐ ಸಿದ್ಧತೆ ನಡೆಸಿದೆ. ಈ ಮಧ್ಯೆ, ಶ್ರೀಲಕ್ಷ್ಮಿ ಐಎಎಸ್ ಅಧಿಕಾರಿ ಆಗಿರುವುದರಿಂದ ಕೇಂದ್ರ ಸರಕಾರದ ಅನುಮತಿಗಾಗಿ ಕಾಯುತ್ತಿದೆ. id="toptextpromo">ಆದರೆ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ವಿರುದ್ಧ ಡಿ. 3ರಂದು ಆರೋಪಪಟ್ಟಿ ಸಲ್ಲಿಸಿರುವ ಸಿಬಿಐ, ಕೋರ್ಟಿನಲ್ಲಿ ವಿಚಾರಣೆಗೆ ತಾನು ಸಿದ್ಧವಿರುವುದಾಗಿ ಮಂಗಳವಾರ ಕೋರ್ಟಿಗೆ ತಿಳಿಸಿದೆ. ಸಾಕ್ಷಿಗಳ ವಿಚಾರಣೆಗೂ ಸಿದ್ಧವಿರುವುದಾಗಿ ಅದು ಸಿಬಿಐ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಇದೇ
ಆರೋಪಪಟ್ಟಿಯ ಪ್ರತಿಯನ್ನು ಡಿ. 20ರಂದು ಸುಪ್ರೀಂ ಕೋರ್ಟಿಗೆ ಸಲ್ಲಿಸುವುದಾಗಿಯೂ ಸಿಬಿಐ ತಿಳಿಸಿದೆ. ಈ ನಡುವೆ, ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಗಣಿ ನಿಗಮದ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಪೂರ್ಣಗೊಳಿಸಿದ್ದು, ಬುಧವಾರ ತನ್ನ ಆದೇಶ ನೀಡಲಿದೆ. ರೆಡ್ಡಿ ಜಾಮೀನು ಭವಿಷ್ಯವೂ ಈ ತೀರ್ಪನ್ನು ಅವಲಂಬಿಸುತ್ತದೆ.











Click it and Unblock the Notifications