ಮೋದಿ ಕೊಲ್ಲಲು ಪಾಕ್ ಮಹಿಳಾ ಗೂಢಾಚಾರಿ ಸಂಚು

ಸೂಫಿಯಾ ಕನ್ವಲ್ ಹಾಗೂ ಇಮ್ರಾನ್ ಎಂಬುವರು ಕರಾಚಿ ಮೂಲದ ಜಿಹಾದಿಗಳಾಗಿದ್ದಾರೆ. ಈ ಉಗ್ರರು ಅಕ್ಷರಧಾಮ ದೇಗುಲ ಸ್ಫೋಟಕ್ಕೆ ಸಂಚು ಹಾಕಿದ್ದರು, ಆಗ್ರಾ ಮತ್ತು ದೆಹಲಿ ಕಂಟೋನ್ಮೆಂಟ್ ನಲ್ಲಿ ಬಾಂಬ್ ದಾಳಿಗೆ ಈ ಐಎಸ್ ಐ ತಂಡದ ಸದಸ್ಯರು ಯೋಜಿಸಿದ್ದರು ಎಂದು ತಿಳಿದು ಬಂದಿದೆ.
ಲಷ್ಕರ್, ಜೈಷ್, ಇಂಡಿಯನ್ ಮುಜಾಹೀದ್ದೀನ್ ಸಹಾಯ ಪಡೆದು ನರೇಂದ್ರ ಮೋದಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ಸ್ಯಾಟಲೈಟ್ ಫೋನ್ ಗಳು, ಅನೇಕ ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮಾಹಿತಿ ಹೊರಬಿದ್ದ ಮೇಲೂ ಪಾಕಿಸ್ತಾನದ ಆಹ್ವಾನವನ್ನು ಮನ್ನಿಸಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ತೆರಳುತ್ತಾರೆಯೇ? ಅಲ್ಲಿನ ಉದ್ಯಮಿಗಳಿಗೆ ಗುಜರಾತ್ ಮಾದರಿ ಅಭಿವೃದ್ಧಿ ಪಾಠ ಮಾಡುತ್ತಾರೆಯೇ? ಎಂಬುದು ಯಕ್ಷಪ್ರಶ್ನೆಯಾಗಿದೆ.












Click it and Unblock the Notifications