ಮೇಲ್ಮನೆಯಲ್ಲಿ ಶ್ರೀರಾಮುಲು ಅಭ್ಯರ್ಥಿಗೇ ನಮ್ಮ ಮತ: ಸೋಮ ರೆಡ್ಡಿ
ಬಳ್ಳಾರಿ,
ಡಿ.11: ನಮ್ಮ ಮತ ಒಂದೇ ಮತ ಎಂದು ಬಳ್ಳಾರಿ ಶಾಸಕರು ಘಂಟಾಘೋಷವಾಗಿ ಹೇಳಿದ್ದಾರೆ. ಮೇಲ್ಮನೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ, ಸದಾನಂದ ಗೌಡರನ್ನು ತನ್ಮೂಲಕ ರಾಜ್ಯ ಬಿಜೆಪಿ ಸರಕಾರವನ್ನು ಉರುಳಿಸುವ ಧ್ಯೇಯೋದ್ದೇಶ ಹೊಂದಿರುವ ಪಕ್ಷೇತರ ಶಾಸಕ ಬಿ. ಶ್ರೀರಾಮುಲುಗೆ ಬಳ್ಳಾರಿ ಶಾಸಕರು ತೋರಿರುವ ಲಕ್ಷ್ಮಣನ ಪ್ರೇಮ ಇದು. id="toptextpromo">ಜನ
ನಮ್ಮನ್ನು ಬಿಜೆಪಿ ಶಾಸಕರು ಎಂದು ಗುರುತಿಸಿದ್ದರೂ ಶ್ರೀರಾಮುಲು ಅವರೇ ನಮ್ಮ ನಾಯಕರು. ಮೇಲ್ಮನೆ ಚುನಾವಣೆಯಲ್ಲಿ ಅವರು ಯಾರಿಗೆ ಮತ ಹಾಕಲು ಹೇಳುತ್ತಾರೋ ಅವರಿಗೇ ನಾವೆಲ್ಲ ಮತ ಹಾಕುವುದಾಗಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ. 'ಬಿಜೆಪಿ ಈವರೆಗೆ ನಮಗೆ ವಿಪ್ ಜಾರಿ ಮಾಡಿಲ್ಲ. ಮಾಡಿದರೂ ಅದರ ಬಗ್ಗೆ ನಾವೇನು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಬಳ್ಳಾರಿ
ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಂಧರ್ಭ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಪರ ನಿಂತು ಬಿಜೆಪಿಗೆ ಸಡ್ಡು ಹೊಡೆದಿದ್ದ ನಾಲ್ವರು ಶಾಸಕರು ಈಗ ವಿಧಾನ ಪರಿಷತ್ ಚುನಾವಣೆಯಲ್ಲೂ ತಿರುಗಿ ಬೀಳುವ ಸೂಚನೆಗಳನ್ನು ನೀಡುತ್ತಿರುವುದು ರಾಜ್ಯ ಬಿಜೆಪಿಗೆ ಸಂಕಟ ತಂದಿದೆ.











Click it and Unblock the Notifications