ಚೂರಿ ಹಿಡಿದು ಗ್ಯಾಂಗ್ ರೇಪ್ ಮಾಡಿ, ಎಂಎಂಎಸ್ ಹಂಚಿದ್ರು

ಚಾಕು ಹಿಡಿದು ಸುಮ್ಮನೆ ಸಹಕರಿಸಿ ಇಲ್ಲದಿದ್ದರೆ ಕೊಂದು ಬಿಡ್ತೀವಿ ಎಂದು ಆಕೆಯನ್ನು ಹೆದರಿಸಲಾಗಿದೆ. ಅತ್ಯಾಚಾರ ಎಸೆಗಿದ ಮೇಲೆ ಎಂಎಂಎಸ್ ಹಂಚುವುದಿಲ್ಲ. ನಮಗೆ ಇಂತಿಷ್ಟು ದುಡ್ದು ಕೊಟ್ಟುಬಿಡು ಎಂದು ಬೆದರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಗರ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಹಿಳೆಯೊಂದಿಗೆ ಆರೋಪಿ ನಂ.1 ಪರಿಚಯವಾಗಿದೆ. ಆರೋಪಿ ನಂ.1 ರಾಜ, ಮಹಿಳೆ ಬಳಿಗೆ ಬಂದು ಸಂಬಂಧಿಕರಿಗೆ ತುರ್ತು ಚಿಕಿತ್ಸೆ ನೀಡಬೇಕು ಸ್ವಲ್ಪ ಸಹಾಯ ಮಾಡ್ತೀರಾ ಎಂದು ಕೇಳಿದ್ದಾನೆ.
ಆದರೆ, ಆಕೆಯನ್ನು ಹತ್ತಿರದ ಫ್ಲಾಟ್ ಗೆ ಕರೆದೊಯ್ದಿದ್ದಾನೆ. ಅಲ್ಲಿ ಉಳಿದ ಆರೋಪಿಗಳಾದ ರೆಹ್ಮಾನ್ ಹಾಗೂ ಶಾರುಖ್ ಆಕೆ ಮೇಲೆ ಬಲಾತ್ಕಾರ ಎಸೆಗಿದ್ದಾರೆ. ರಾಜ ಕೂಡಾ ಆಕೆಯನ್ನು ಅನುಭವಿಸಿ, ವಿಡಿಯೋ ಚಿತ್ರೀಕರಿಸಿದ್ದಾನೆ.
ಘಟನೆಯಿಂದ ಶಾಕ್ ಗೆ ಒಗಾಗಿದ್ದ ಮಹಿಳೆ, ಆರೋಪಿಗಳಿಗೆ ಹೆದರಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಇದರ ಲಾಭ ಪಡೆದ ಆರೋಪಿಗಳು ಆಕೆಯಿಂದ ತಿಂಗಳಿಗೆ 5 ಸಾವಿರದಂತೆ ಪಡೆದಿದ್ದಾರೆ. ಆಮೇಲೆ 5 ಸಾವಿರ ಹೋಗಿ 50,000 ರೂ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.
ಇದಕ್ಕೆ ಮಹಿಳೆ ಒಪ್ಪದಿದ್ದಾಗ, ಎಂಎಂಎಸ್ ಕಾಳ ಮಾರುಕಟ್ಟೆ ಸೇರಿದೆ. ಸೈಬರ್ ಪೊಲೀಸರು ಪ್ರಕರಣವೊಂದಕ್ಕೆ ಜಾಲ ಬೀಸಿದ್ದಾಗ ಈ ಕೇಸ್ ಸಿಕ್ಕಿದೆ. ಮಹಿಳೆ ಕೂಡಾ ಧೈರ್ಯ ಮಾಡಿ ತನ್ನ ಕಥೆ ವ್ಯಥೆ ಹೇಳಿಕೊಂಡಿದ್ದಾಳೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.












Click it and Unblock the Notifications