ಶೀಘ್ರದಲ್ಲೇ ಯುಪಿಎ ಕ್ಯಾಬಿನೆಟ್ ಗೆ ಚಿರಂಜೀವಿ?

ಉತ್ತರ ಪ್ರದೇಶದ ನಡೆಯಲಿರುವ ಮುಂದಿನ ಅಸೆಂಬ್ಲಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷ, ಆರ್ ಎಲ್ ಡಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಮಾಯಾವತಿಗೆ ಟಾಂಗ್ ನೀಡಲು ಸಿದ್ಧತೆ ನಡೆಸಿದೆ.
ಕಾಂಗ್ರೆಸ್ ಜತೆ ಕೈ ಜೋಡಿಸಿರುವ ಪ್ರಜಾರಾಜ್ಯಂ ಪಕ್ಷಕ್ಕೆ ಇನ್ನೂ ಆಂಧ್ರಪ್ರದೇಶದಲ್ಲಿ ಗಟ್ಟಿನೆಲೆ ಸಿಕ್ಕಿಲ್ಲ. ಕಾಂಗ್ರೆಸ್ ನಾಯಕರು ಕೂಡಾ ಎರಡನೇ ದರ್ಜೆ ಸಹದ್ಯೋಗಿಗಳಂತೆ ಕಾಣುತ್ತಿದ್ದಾರೆ.
ಈ ಬಗ್ಗೆ ಪಿಆರ್ ಪಿ ಶಾಸಕರು, ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಕಾಂಗ್ರೆಸ್ ಹೈಕಮಾಂಡ್, ಪಿಆರ್ ಪಿ ಶಾಸಕರಿಗೆ ಕಿರಣ್ ಕುಮಾರ್ ರೆಡ್ಡಿ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಮುಂದಾಗಿದೆ.
ಇದಕ್ಕಿಂತ ಮುಖ್ಯವಾಗಿ ಪಿಆರ್ ಪಿ ಮುಖ್ಯಸ್ಥ ಚಿರಂಜೀವಿ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಖಾತೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ. ಯುಪಿಎ ಸರ್ಕಾರದ ಕರೆಗಾಗಿ ಚಿರಂಜೀವಿ ಕಾತುರದಿಂದ ಕಾದಿದ್ದಾರೆ.












Click it and Unblock the Notifications