ನಿದ್ರಾಭಂಗ: ಹೆತ್ತ ಕಂದನನ್ನೇ ಸಾಯಿಸಿದ ಪಾಪಿ ಅಪ್ಪ-ಅಮ್ಮ

ಇಲ್ಲಿನ ಹರಿದೇವನಗರದ ಶುಶಾಂತ್ (3) ಮೃತ ಮಗು. ತಾಯಿ ಹೇಮಾ ಹಾಗೂ ತಂದೆ ಚಂದ್ರು ಇಬ್ಬರೂ ಸೇರಿಯೇ ಮಗುವನ್ನು ನೆಲಕ್ಕೆ ಬಡಿದು ಸಾಯಿಸಿದ್ದಾರೆ ಎನ್ನಲಾಗಿದೆ. ಮಗು ಒಂದೇ ಸಮನೆ ಅಳುತ್ತಾ ರಂಪ ಮಾಡುತ್ತಿದ್ದುದರಿಂದ ನಿದ್ರೆಗೆ ತೊಂದರೆಯಾಯಿತೆಂದು ತಂದೆ-ತಾಯಿ ಈ ಕೃತ್ಯವೆಸಗಿದ್ದಾರೆ. ಮಗುವನ್ನು ಕೊಲೆ ಮಾಡಿದ ಸುದ್ದಿ ತಿಳಿದ ಸ್ಥಳೀಯರು ಹೇಮಾ ಮತ್ತು ಚಂದ್ರುಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.












Click it and Unblock the Notifications