ಡಬ್ಬಲ್ ಮರ್ಡರ್ ಕೇಸ್ : ಬಿಎಸ್ಪಿ ಸಂಸದ ಬಂಧನ

ಮಾಜಿ ಮಾಫಿಯಾ ಡಾನ್ ಹಾಲಿ ರಾಜಕಾರಣಿ ಧನಂಜಯ್ ಅವರನ್ನು ಬಂಧಿಸಿ, ಜೈನ್ ಪುರಕ್ಕೆ ಕಳುಹಿಸಲಾಗಿದೆ.
ಕೆರಕಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಲವ್ ನವ್ ಘಾಟ್ ಗ್ರಾಮದ ಕಂಟ್ರಾಕ್ಟರ್ ಸಂಜಯ್ ನಿಶಾದ್ ಹಾಗೂ ಟೀ ಅಂಗಡಿ ಮಾಲೀಕ ನಂದಲಾಲ್ ನಿಶಾದ್ ಎಂಬುವವರನ್ನು ಸಂಸದ ಧನಂಜಯ್ ಸಿಂಗ್ ಬಲಗೈ ಬಂಟ ಆಶುತೋಷ್ ಸಿಂಗ್ 2010 ರಲ್ಲಿ ಹತ್ಯೆ ಮಾಡಿದ್ದ. ಈ ಆರೋಪದ ಮೇಲೆ ಧನಂಜಯ್ ಅವರನ್ನು ಬಂಧಿಸಲಾಗಿದೆ ಎಂದು ಡಿಐಜಿ ಠಾಕೂರ್ ಹೇಳಿದ್ದಾರೆ.
ಸಂಜಯ್ ಹತ್ಯೆ ನಂತರ ಪಾನ್ ಟೂನ್ ಅಣೆಕಟ್ಟು ಗುತ್ತಿಗೆಯನ್ನು ಸಂಸದ ತನ್ನದಾಗಿಸಿಕೊಂಡಿದ್ದರು ಎಂದು ಡಿಐಜಿ ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಧನಂಜಯ್ ಸಿಂಗ್ ಅವರನ್ನು ಮುಖ್ಯಮಂತ್ರಿ ಮಾಯಾವತಿ ತಮ್ಮ ಪಕ್ಷದಿಂದ ಉಚ್ಚಾಟಿಸಿದ್ದರು.












Click it and Unblock the Notifications