ಅಥ್ಲೀಟ್ ಪೃಥ್ವಿ ಸಾವಿಗೆ ಪ್ರಿಯಕರ ಮಿಸ್ಬಾನ್ ಕಾರಣ

misban-instigated-athlete-prithvi-suicide-report
ಬ್ರಹ್ಮಾವರ, ಡಿ.12: ಸುಮಾರು ಎರಡೂವರೆ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಕುಂದಾಪುರ ತಾಲೂಕಿನ ಎಸ್. ಪಿ. ಪೃಥ್ವಿ ಅಂಪಾರು ಸಾವಿಗೆ ಪ್ರಿಯಕರ ಕಾರಣ ಎಂದು 'ದಟ್ಸ್ ಕನ್ನಡ' ವ್ಯಕ್ತಪಡಿಸಿದ್ದ ಸಂಶಯ ನಿಜವಾದಂತಿದೆ. ಈ ಸಂಬಂಧ ಜಿಲ್ಲಾ ಎಸ್ಪಿ ತನಿಖೆ ಪೂರ್ಣಗೊಳಿಸಿದ್ದು, ಒಂದೆರಡು ದಿನದಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸುವ ಸಾಧ್ಯತೆ ಇದೆ.

ಅಂತಾರಾಷ್ಟ್ರೀಯ ಕ್ರೀಡಾಕ್ಷೇತ್ರದಲ್ಲಿ ಬೆಳಗಬೇಕಿದ್ದ ಭರವಸೆಯ ಕ್ರೀಡಾಪಟು ಎಸ್. ಪಿ. ಪೃಥ್ವಿ ಅಂಪಾರು (18) ಕಾಲೇಜಿನ ಹಾಸ್ಟೆಲ್ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಸೆ. 27 ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಜ್ಯಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಈ ಪ್ರಕರಣವನ್ನು ವಿಶೇಷ ತನಿಖಾಧಿಕಾರಿಯಾಗಿ ನೇಮಕವಾಗಿದ್ದ ಕುಂದಾಪುರ ಸಹಾಯಕ ಎಸ್ಪಿ ರಾಮ್ ನಿವಾಸಿ ಸೇಪಾಟ್ ಅವರು ತನಿಖೆ ವರದಿಯನ್ನು ಸಿದ್ಧಪಡಿಸಿದ್ದು, ಪೃಥ್ವಿ ಆತ್ಮಹತ್ಯೆಗೆ ಸ್ಥಳೀಯ ಯುವಕ ಮಿಸ್ಬಾನ್ ಪ್ರೇರಣೆ ನೀಡಿದ್ದಾನೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಪೃಥ್ವಿ ಆತ್ಮಹತ್ಯೆ ಮಾಡಿಕೊಂಡ ಎಸ್‌ಎಂಎಸ್ ಕಾಲೇಜಿನ ಮಹಿಳಾ ಹಾಸ್ಟೆಲ್ ರೂಮಿನಿಂದ ವಶಪಡಿಸಿಕೊಳ್ಳಲಾದ ಆಕೆಯ ಡೈರಿಯಲ್ಲಿ ಆತನ ಹೆಸರು ಕಾಣಿಸಿಕೊಂಡಿದ್ದು, ಇಬ್ಬರ ನಡುವಿನ ಪ್ರೇಮ ಪ್ರಕರಣವೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಶಂಕಿಸಿ ಬ್ರಹ್ಮಾವರದ ಸರ್ಕಲ್ ಇನ್‌ಸ್ಪೆಕ್ಟರ್ ಜಿ. ಕೃಷ್ಣಮೂರ್ತಿ ಆತನನ್ನು ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+