ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ರಾಜೀನಾಮೆ?

ರಾಜಕೀಯ ಒಳಜಗಳದಿಂದ ಬೇಸತ್ತಿರುವ ಸಂಗಮೇಶ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕೆಜಿ ಬೋಪಯ್ಯ ಹಾಗೂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
'ಕಷ್ಟದ ಪರಿಸ್ಥಿತಿಯಲ್ಲಿರುವಾಗ ನೆರವಿಗೆ ಬಾರದ ಹಿರಿಯ ನಾಯಕರ ಧೋರಣೆಯಿಂದ ಸಾಕಷ್ಟು ನೊಂದಿದ್ದೇನೆ. ವೃಥಾ ಆರೋಪಗಳಿಂದ ಬೇಸತ್ತಿದ್ದೇನೆ. ರಾಜಕೀಯದಿಂದ ಬೇಸರಗೊಂಡು ನಿವೃತ್ತಿ ಬಯಸಿದ್ದೇನೆ' ಎಂದು ಸಂಗಮೇಶ್ ಅವರು ತಮ್ಮ ರಾಜೀನಾಮೆಗೆ ಕಾರಣ ಕೊಟ್ಟಿದ್ದಾರೆ.
ಭದ್ರಾವತಿಯ ವಿವಾದಿತ ಶಾಸಕ ಕಾಂಗ್ರೆಸ್ಸಿನ ಬಿ.ಕೆ. ಸಂಗಮೇಶ್ ಅವರು ಕರ್ತವ್ಯ ನಿರತ ಇನ್ಸ್‌ಪೆಕ್ಟರ್ ಪರುಶುರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸಿದ್ದರು. ಐಪಿಸಿ ಸೆಕ್ಷನ್ 143, 504, 353 ಹಾಗೂ 186ರ ಅಡಿ ಶಾಸಕ ಸಂಗಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆದರೆ, ಭದ್ರಾವತಿಯ ಜೆಎಫ್ ಎಂಸಿ ಕೋರ್ಟ್ ಶಾಸಕ ಸಂಗಮೇಶ್ ಅವರಿಗೆ ಜಾಮೀನು ನೀಡಿತ್ತು.












Click it and Unblock the Notifications