ಯಡ್ಡಿ ಸಿಎಂ ಆಗೋದಾದ್ರೆ ಗೌಡರ ಸ್ಪರ್ಧೆಯೇಕೆ?

ಸದಾನಂದ ಗೌಡ ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವಾಗಲೇ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದಾದರೆ, ಸದಾನಂದ ಗೌಡ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧೆಯಾದರೂ ಯಾಕೆ ಮಾಡಬೇಕು? ಮುಖ್ಯಮಂತ್ರಿ ಸ್ಥಾನ ಮತ್ತು ಸದಾನಂದ ಗೌಡರ ಗೌರವ ಎಲ್ಲಿಗೆ ಬಂತು?
ಎಲ್ಲ ಸಂಪುಟ ಸಚಿವರ ಜೊತೆ ಚಂದ್ರ ಗ್ರಹಣ ಮುಗಿದ ಮರುದಿನ ಸೋಮವಾರ ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸುವುದಾಗಿ ಹೇಳಿರುವ ಸದಾನಂದ ಗೌಡರು, ಯಡಿಯೂರಪ್ಪ ಮುಕ್ತರಾದಾಗ ತಮ್ಮ ಸ್ಥಾನ ಬಿಟ್ಟುಕೊಡುತ್ತಾರೆಯೆ? ಯಾಕೆ ಕೊಡಬೇಕು ಎಂಬುದು ಮತ ಹಾಕಿದ ಜನಸಾಮಾನ್ಯರ ಪ್ರಶ್ನೆ.
ಹಾಗೆಯೆ ಈಶ್ವರಪ್ಪ ಈ ಹೇಳಿಕೆ ಕುರಿತಂತೆ ಕೆಲ ಪ್ರಶ್ನೆಗಳೇಳುವುದೂ ಸಹಜ. ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಬೇರೆ ನಾಯಕರೇ ಇಲ್ಲವೆ? ಸದಾನಂದ ಗೌಡರು ಸೂತ್ರದ ಗೊಂಬೆಯಾ? ಈಶ್ವರಪ್ಪ ಅವರ ಅಬ್ಬರ ಎಲ್ಲಿ ಮರೆಯಾಯಿತು? ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುತ್ತಿದ್ದ ಈಶ್ವರಪ್ಪ ಇದ್ದಕ್ಕಿದ್ದಂತೆ ತಣ್ಣಗಾಗಿದ್ದು ಏಕೆ? ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ನಡೆದ ರಹಸ್ಯ ಒಪ್ಪಂದವಾದರೂ ಯಾವುದು?
ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡೋದೆ ಆದ್ರೆ ಆರೋಪ ಮುಕ್ತರಾಗುವುದರವರೆಗೆ ಯಾಕೆ ಕಾಯಬೇಕು? ಆರೋಪ ಇನ್ನೂ ಸಾಬೀತಾಗಿಲ್ಲದ ಕಾರಣ ಈಗಲೇ ಬಿಟ್ಟುಕೊಡಬಹುದಲ್ಲ. ಸದಾನಂದ ಗೌಡರು ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿ ಅನವಶ್ಯಕವಾಗಿ ವಿರೋಧಿಗಳೊಂದಿಗೆ ಒದ್ದಾಡುವುದಾದರೂ ತಪ್ಪುತ್ತದೆ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಈಶ್ವರಪ್ಪ ಮಾತಾಡುವುದು ಏಕೆ?











Click it and Unblock the Notifications