ನಿಲೇಕಣಿಯ 'ಆಧಾರ'ಕ್ಕೆ ಕೈ ಎತ್ತಿದ ಅಂಚೆ ಇಲಾಖೆ

ಇಂತಿಪ್ಪ ಅಂಚೆ ಇಲಾಖೆಗೆ ಒಂದಷ್ಟು ಉದ್ಯೋಗವನ್ನೂ ಕೊಟ್ಟಹಾಗೆ ಆಗುತ್ತದೆ ಎಂದು ಎಣಿಸಿದ ಆಧಾರ್ ಮಂದಿ 'ನಮ್ಮದೊಂದಿಷ್ಟು ಸೇವೆ ಇದೆ ಮಾಡಿಕೊಡಿ. ಆಧಾರ್ ನಂಬರ್ ಕಾರ್ಡ್ ಪ್ರಿಂಟ್ ಹಾಕಿಸಿಕೊಡಿ. ಮನೆ ಮನೆಗೆ ಹೋಗಿ ಆಧಾರ್ ನಂಬರ್ ಕಾರ್ಡ್ ವಿತರಿಸಿ ಬನ್ನಿ' ಎಂದರು. ಅಂಚೆ ಮಂದಿಯೂ ಉತ್ಸಾಹದಿಂದ 'ಸದ್ಯ ಯಾವುದೋ ಒಂದು ಕೆಲ್ಸ ಸಿಕ್ಕಿತಲ್ಲಾ' ಎಂದು ಖುಷಿಪಟ್ಟರು.
ಆದರೆ, ಹಿಂದಿಲ್ಲ ಮುಂದಿಲ್ಲ. ಏನಂತ ಕೆಲ್ಸ ಮಾಡೋದು!? ಆಧಾರ್ ನಂಬರ್ ಕಾರ್ಡ್ ಪ್ರಿಂಟ್ ಹಾಕಿಸಲು ಮೂಲಸೌಕರ್ಯವೇ ಇಲ್ಲ. ಅಷ್ಟೊಂದು ಬಂಡವಾಳ ಎಲ್ಲಿಂದ ತರೋದು. ಅಷ್ಟು ಸುರಿದರೂ ಭವಿಷ್ಯದಲ್ಲಿ ಅದೆಲ್ಲ ಎಲ್ಲಿ ಬಳಕೆಗೆ ಬರುತ್ತದೆ? ವೇಸ್ಟ್ ಇನ್ ವೆಸ್ಟ್ ಮೆಂಟು ಎಂದು ಇಲಾಖೆಯೂ ಸುಮ್ಮನಾಯಿತು.
ಆದರೂ ಕೇಂದ್ರ ಸರಕಾರ ಒಂದಷ್ಟು ಪುಸಲಾಯಿಸಿ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಇಲಾಖೆಯನ್ನು ಪ್ರೋತ್ಸಾಹಿಸಿತು. ಆದರೆ ಮುಂದೇನೂ ಆಗಿಲ್ಲ. ಅದಕ್ಕೇ ಇಂದು ನೀವೇನಾದರೂ Uid status ಗೆ ಹೋಗಿ ನೋಡಿದರೆ ಅಲ್ಲಿ ಕಾರ್ಡ್ ಮುದ್ರಣ ಕಾಲಘಟ್ಟದಲ್ಲಿ ಚಕ್ರ ಸ್ಥಗಿತಗೊಂಡಿರುವುದು ಗೋಚರವಾಗುತ್ತದೆ. ಜತೆಗೆ, ಅಂಚೆ ಇಲಾಖೆಯ ಮೇಲೆ ಗೂಬೆ ಕೂರಿಸಿರುವುದೂ ಗೋಚರವಾಗುತ್ತದೆ.
ಈ ಮಧ್ಯೆ, ಅಸಲಿಗೆ ಆಧಾರ್ ನಂಬರೇ ಬೇಡ ಅನ್ನುತ್ತಿದೆ ಸಂಸತ್ತಿನ ಸ್ಥಾಯಿ ಸಮಿತಿ. ಅಂದಹಾಗೆ, ಸಮಿತಿ ತನ್ನ ವರದಿಯನ್ನು ಇನ್ನೂ ಅಧಿಕೃತವಾಗಿ ಸಲ್ಲಿಸಿಲ್ಲ. ಇದು ಸೋರಿಕೆಯಾದ ಸತ್ಯ ವರದಿ.











Click it and Unblock the Notifications