ಮತ್ತೆ ರೋಡ್ ರೇಗಣ್ಣನಾದ ಸಿದ್ದು; ಬಂಧನಕ್ಕೆ ಕ್ಷಣಗಣನೆ
ನೆಲ್ಲೂರು,
ಡಿ. 8: ನಮ್ಮ ಖ್ಯಾತ ದಾಂಡಿಗ ನವಜೋತ್ ಸಿಂಗ್ ಸಿದ್ದು ಮತ್ತೊಮ್ಮೆ ರೋಡ್ ರೇಗಣ್ಣ ಆಗಿದ್ದಾರೆ. ಹಿಂದೊಮ್ಮೆ ಯುವಕನೊಬ್ಬ ತನ್ನ ಕಾರಿಗೆ ಹಿಂದಿನಿಂದ ಮುತ್ತಿಕ್ಕಿದ ಎಂದು ಸಿಟ್ಟಿಗೆದ್ದ ನಮ್ಮ ಸಿಖ್ಖಣ್ಣ ಅವನ ಮೇಲೆ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಪರಲೋಕಕ್ಕೆ ಕಳಿಸಿದ್ದರು. ಆದರೆ ಈಗ ಯಾರನ್ನೂ ಸಾಯಿಸಿಲ್ಲವಾದರೂ... id="toptextpromo">ಬಿಜೆಪಿ
ಸಂಸದ ನವಜೋತ್ ಸಿಂಗ್ ಸಿದ್ದು ಗೆಳೆಯ, ಬಿಜೆಪಿಯ ಮತ್ತೊಬ್ಬ ಧುರೀಣ ಎಂ ವೆಂಕಯ್ಯ ನಾಯ್ಡು ಅವರು ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ಚೆನ್ನೈನಿಂದ ನೆಲ್ಲೂರು ಜಿಲ್ಲೆಯ ವೆಂಕಟಾಚಲಂನತ್ತ ಬುಧವಾರ ಕಾರಿನಲ್ಲಿ ಓಡುತ್ತಿದ್ದರು. ಆದರೆ ಕಾರು ಹೈವೆ ಟೋಲ್ ಗೇಟ್ ಬಳಿ ಬಂದಾಗ ನಿಲ್ಲಿಸುವಂತೆ ಸೆಕ್ಯುರಿಟಿ ಗಾರ್ಡ್ ಕೈಯೊಡ್ಡಿದ್ದಾನೆ. ಕಾರು ನಿಲ್ಲದೆ ಮುಂದೆ ಸಾಗಿದೆ. ಆಗ ಗಾರ್ಡ್ ತನ್ನ ಕೈಯಲ್ಲಿದ್ದ ಕೋಲನ್ನು ಕಾರಿನ ಮೇಲೆ ಎಸೆದಿದ್ದಾನೆ. ಅಷ್ಟೆ... id='are-slot-1' class='oiad oi-axt oiadv'> id='top-searched-articles'>ಕಾರಿನಿಂದ
ಕೆಳಗಿಳಿದ ರೋಡ್ ರೇಗಣ್ಣ ಸಿದ್ದು ಗಾರ್ಡ್ ಮೇಲೆ ಸಖತ್ ಬ್ಯಾಟಿಂಗ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ ಅವನನ್ನು ಕಾರಿನಲ್ಲಿ ಎತ್ತಿಹಾಕಿಕೊಂಡು ಹೋಗಿ ಸ್ವಲ್ಪ ದೂರದ ನಂತರ ಬಿಟ್ಟಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು, ಸಿದ್ದಣ್ಣನಿಗಾಗಿ ಹುಡುಕಾಡುತ್ತಿದ್ದಾರೆ.











Click it and Unblock the Notifications