ಬಂಜೆ ಪತ್ನಿ ಕೊಲ್ಲಲು ಗಾಜಿನ ಚೂರು ತಿನ್ನಿಸಿದ ಪತಿ

ಪತಿ ನೀರಜ್ ನೀಡುವ ಹಿಂಸೆ ತಾಳಲಾರದೆ ಕರೀನಾ ನೋವಿನಿಂದ ಕೂಗಿದ್ದಾಳೆ. ಈ ಸಮಯಕ್ಕೆ ನೆರೆ ಮನೆಯವರು ಬಂದು ಆಕೆಯನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕರೀನಾ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ನೀರಜ್ ಹಾಗೂ ಕರೀನಾ ಮದುವೆಯಾಗಿ ಎರಡೂವರೆ ವರ್ಷವಾಗಿತ್ತು. ಆದರೆ, ಮಕ್ಕಳಾಗಿರಲಿಲ್ಲ. ಇದರಿಂದ ಬೇಸತ್ತ ನೀರಜ್ ಸದಾ ಕರೀನಾಳ ಮೇಲೆ ಹಲ್ಲೆ ಮಾಡುತ್ತಿದ್ದ.
ಈ ನಡುವೆ ಮತ್ತೊಮ್ಮೆ ಮದುವೆಯಾಗುವ ಹುಮ್ಮಸ್ಸು ಬಂದು ಕರೀನಾಳಿಂದ ವಿಚ್ಛೇದನ ಬಯಸಿದ್ದ. ಆದರೆ, ಇದಕ್ಕೆ ಕರೀನಾ ಹಾಗೂ ಆಕೆ ಮನೆಯವರು ಒಪ್ಪಿಗೆ ನೀಡಿರಲಿಲ್ಲ. ಕೊನೆಗೆ ಕರೀನಾಳನ್ನು ಕೊಂದಾದರೂ ಇನ್ನೊಂದು ಮದುವೆಯಾಗುವುದಾಗಿ ಹೇಳಿಕೊಂಡು ತಿರುಗುತ್ತಿದ್ದ ನೀರಜ್ ಈ ದುಷ್ಕೃತ್ಯಕ್ಕೆ ಕೈ ಹಾಕಿದ್ದಾನೆ.
ನೀರಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications