ಬಿಜೆಪಿ ಅಧ್ಯಕ್ಷ ಸ್ಧಾನಕ್ಕೆ ಬೇಡಿಕೆ ಇಟ್ಟಿದ್ದ ಶ್ರೀರಾಮುಲು

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿ ಸಚಿವ ಸ್ಧಾನ ಕಳೆದುಕೊಂಡ ಸಂದರ್ಭದಲ್ಲಿ ರಾಮುಲು ಈ ಒತ್ತಡ ಹೇರಿದ್ದರು ಎನ್ನಲಾಗಿದೆ.
ಎರಡು ತಿಂಗಳ ಹಿಂದೆ ಬದಲಾದ ವಿದ್ಯಮಾನಗಳ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದ ಸಂದರ್ಭದಲ್ಲಿ ತಾವು ಬಿಜೆಪಿಯಲ್ಲಿ ಉಳಿಯಬೇಕಾದರೆ ತಮಗೆ ಪಕ್ಷದ ಉಸ್ತುವಾರಿ ವಹಿಸುವಂತೆ ಕೋರಿದ್ದರು.
ಸಂಘ ಪರಿವಾರದ ಹಿನ್ನೆಲೆ ಹೊಂದಿರದ ಹಾಗೂ ತತ್ವ ಸಿದ್ಧಾಂತದ ಬಗ್ಗೆ ಅಷ್ಟಾಗಿ ತಿಳಿವಳಿಕೆ ಇಲ್ಲದ ರಾಮುಲು ಅವರನ್ನು ಪಕ್ಷದ ಅಧ್ಯಕ್ಷ ಸ್ಧಾನಕ್ಕೆ ತಂದರೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಅಲ್ಲದೇ ಇದಕ್ಕೆ ನಮ್ಮ ಪಕ್ಷದಲ್ಲಿ ಅವಕಾಶವೂ ಆಗುವುದಿಲ್ಲ ಎಂಬುದನ್ನು ಅರಿತಿದ್ದ ಗಡ್ಕರಿ ರಾಮುಲು ಒತ್ತಾಡಕ್ಕೆ ಮಣಿದಿರಲಿಲ್ಲ.
ಸ್ವತ: ಗಡ್ಕರಿ ಅವರೇ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೆ ಈ ವಿಷಯ ತಿಳಿಸಿದ್ದರು. ಗಣಿ ರೆಡ್ಡಿ ಪಡೆಯಿಂದ ಪಕ್ಷದ ಅಧ್ಯಕ್ಷ ಹುದ್ದೆಗೆ ಬೇಡಿಕೆ ಬಂದಿದೆ. ಅವರನ್ನು ಸಮಾಧಾನಪಡಿಸಿ ಪಕ್ಷದಲ್ಲೇ ಉಳಿಸಿಕೊಳ್ಳಿ ಎಂದು ಗಡ್ಕರಿ ಸಲಹೆ ನೀಡಿದ್ದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.












Click it and Unblock the Notifications