ಬಿಜೆಪಿಯ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಶ್ರೀರಾಮ

ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರದು ಎಲುಬಿಲ್ಲದ ನಾಲಿಗೆ. ಬಿಜೆಪಿ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದೆ. ತಮ್ಮ ಸ್ವಾಭಿಮಾನವನ್ನು ಕೆಣಕಿದೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಹೇಳಿದ್ದ ಮಾತುಗಳನ್ನೇ ರಾಮುಲು ಪುನರುಚ್ಚರಿಸಿದ್ದಾರೆ.
'ಈಶ್ವರಪ್ಪ, ಯಡಿಯೂರಪ್ಪ ನಿಜಕ್ಕೂ ಕೃತಘ್ನರು. ಬಳ್ಳಾರಿಗೆ ಬಂದಾಗ ನಮ್ಮ ಸೇವೆಯನ್ನು ಮರೆಮಾಚಿ, ನಮ್ಮನ್ನು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇನ್ನು ರೇಣುಕಾಚಾರ್ಯ ಬಗ್ಗೆ ಮಾತನಾಡದಿರುವದೇ ಕ್ಷೇಮ' ಎಂದು ರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಬಳ್ಳಾರಿ ರೆಡ್ಡಿ ಸೋದರರು ಬುಧವಾರದಂದು ರಾಜಕೀಯ ವಿರೋಧಾಭಾಸ ಹೇಳಿಕೆಗಳನ್ನು ನೀಡಿದ್ದು, ಅವರ ರಾಜಕೀಯ ನಡೆಯನ್ನು ನಿಗೂಢವಾಗಿಸಿದೆ. ಗಮನಾರ್ಹವೆಂದರೆ ಬಿಜೆಪಿ ಮಂದಿ ಈ ಇಬ್ಬರೂ ನಾಯಕರ ಹೇಳಿಕೆಗಳಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಚಂಚಲಗೂಡ ಜೈಲಿನತ್ತ ಎಲ್ಲರ ನೋಟ: ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಶ್ರೀರಾಮುಲು ಅವರು ಹೈದರಾಬಾದಿನ ಚಂಚಲಗೂಡ ಜೈಲಿಗೆ ಭೇಟಿ ನಿಡಲಿದ್ದು, ಜನಾರ್ದನ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸುವ ಕಾರ್ಯಕ್ರಮವಿದೆ. ಬಹುಶಃ ಅಲ್ಲಿ ರೆಡ್ಡಿ ಸೋದರರ ರಾಜಕೀಯ ನಡೆ ತೀರ್ಮಾನಗೊಳ್ಳುವ ನಿರೀಕ್ಷೆಯಿದೆ.












Click it and Unblock the Notifications