ಶುಕ್ರವಾರ, ಡಿ 23ರಂದು ಕರ್ನಾಟಕ ಬಂದ್

State Bundh
ಬೆಂಗಳೂರು, ಡಿ 7: ಬೆಳಗಾವಿ ಮಹಾನಗರಪಾಲಿಕೆಯನ್ನು ಸೂಪರ್ ಸೀಡ್ ಮಾಡದೆ ಇದ್ದಲ್ಲಿ ಶುಕ್ರವಾರ ಡಿಸೆಂಬರ್ 23 ರಂದು ಕರ್ನಾಟಕ ಬಂದ್ ನಡೆಸಲು ಕನ್ನಡ ಒಕ್ಕೂಟ ನಿರ್ಧರಿಸಿದೆ. ಬಂದ್ ಗೆ ರಾಜ್ಯದ ಎಲ್ಲಾ ಸಂಘಟನೆಗಳು ಬೆಂಬಲ ನೀಡಿ ಏಕತೆ ಪ್ರದರ್ಶಿಸ ಬೇಕೆಂದು ಒಕ್ಕೂಟ ಮನವಿ ಮಾಡಿದೆ.

ಡಿಸೆಂಬರ್ 8 ರಂದು ಬೆಳಗ್ಗೆ 11 ಗಂಟೆಗೆ ಪಾಲಿಕೆ ಸೂಪರ್ ಸೀಡ್ ಗೆ ಒತ್ತಾಯಿಸಿ ಕನ್ನಡ ಒಕ್ಕೂಟಗಳು ರಾಜಭವನ ಮುತ್ತಿಗೆ ಹಾಕಲು ನಿರ್ಧರಿಸಿವೆ. ಈ ಕಾರ್ಯಕ್ರಮದ ನಂತರವೂ ಸರಕಾರ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಬಂದ್ ಗೆ ಕರೆ ನೀಡಲಾಗುವುದು ಎಂದು ಒಕ್ಕೂಟ ಪತ್ರಿಕಾ ಹೇಳಿಕೆ ನೀಡಿದೆ.

ಮುಂಬೈ ನಗರದಲ್ಲಿ 20 ಲಕ್ಷ ಕನ್ನಡಿಗರಿದ್ದಾರೆ. ಅಲ್ಲಿ ಕನ್ನಡಿಗರ ಮೇಲೆ ಏನಾದರೂ ದಾಳಿ ನಡೆಸಿದರೆ ರಾಜ್ಯ ವ್ಯಾಪಿ ತೀವ್ರ ಹೋರಾಟ ನಡೆಸಲಾಗುವುದು. ಕೇಂದ್ರದಲ್ಲಿ ರಾಜ್ಯದ ಸಂಸದರು ಮುಂಬೈ ನಲ್ಲಿರುವ
ಕನ್ನಡಿಗರಿಗೆ ಸಮಗ್ರ ರಕ್ಷಣೆ ನೀಡಲು ಪ್ರಧಾನಮಂತ್ರಿ, ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲು ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಅಖಿಲ ಕರ್ನಾಟಕ ರಾಜಕುಮಾರ್ ಅಭಿಮಾನಿಗಳ ಸಂಘ, ಕರವೇ ಎರಡೂ ಬಣ, ಕನ್ನಡ ಸೇನೆ, ದಲಿತ ಸಂಘರ್ಷ ಸಮಿತಿ, ಕನ್ನಡ ಚಳುವಳಿ ವಾಟಾಳ್ ಪಕ್ಷದವರು ಜಂಟಿಯಾಗಿ ಈ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+