ನನ್ನ ಖರೀದಿಗೆ ಡೀಲ್ ನಡಿತೀದೆ: ಜೆಡಿಎಸ್ ಶಾಸಕ ಬಾಲಕೃಷ್ಣ

'ಬಿಜೆಪಿ ಸೇರಿದರೆ ಸಚಿವ ಸ್ಥಾನ ನೀಡುತ್ತೇವೆ ಎಂಬ ಭರವಸೆ ನೀಡಿ ನನಗೆ ಆಹ್ವಾನ ಕಳುಹಿಸಲಾಲಾಗಿತ್ತು' ಎಂದು ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ. ಆದರೆ, ಯಾರ ಮೂಲಕ ಅಹ್ವಾನ ಕರೆ ಬಂದಿತ್ತು ಎಂಬುದನ್ನು ಹೊರಹಾಕಲಿಲ್ಲ.
ಬಿಡದಿ ರೆಸಾರ್ಟ್‌ನಲ್ಲಿ ಜೆಡಿಎಸ್ ಶಾಸಕಾಂಗ ಸಭೆ ಮುಗಿದ ನಂತರ ಮಾತನಾಡಿದ ಬಾಲಕೃಷ್ಣ, ಹತ್ತಿರ ಸ್ನೇಹಿತರೊಬ್ಬರ ಮೂಲಕ ಬಿಜೆಪಿ ಸೇರುವಂತೆ, ಆ ಪಕ್ಷದ ಹಿರಿಯ ಮುಖಂಡರು ಆಹ್ವಾನ ನೀಡಿದ್ದರು.'ಯಾವುದೇ ಕಾರಣಕ್ಕೂ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ' ಎಂದು ಹೇಳಿ ಕಳಿಸಿಬಿಟ್ಟೆ ಎಂದರು
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಪಕ್ಷದ ರಾಜಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಿಗೋಸ್ಕರ ನಾನು ರಾಜಕೀಯದಲ್ಲಿ ಇದ್ದೇನೆ. ಜೆಡಿಎಸ್ ಪಕ್ಷ ತೊರೆಯುವ ಮಾತಿಲ್ಲ ಎಂದು ಬಾಲಕೃಷ್ಣ ಮತ್ತೊಮ್ಮೆ ಸ್ಪಷ್ಟಪಡಿಸಿದರು.












Click it and Unblock the Notifications