ಜಾರಿ ನಿರ್ದೇಶನಾಲಯದಿಂದ ರೆಡ್ಡಿ ಪತ್ನಿ ಅರುಣಾಲಕ್ಷ್ಮಿ ಬಂಧನ?

ಬೆಂಗಳೂರು, ಡಿ. 6: ತಮ್ಮ ರಾಜಕೀಯ ಬಂಟ ಶ್ರೀರಾಮುಲು ಭರ್ಜರಿ ಗೆಲುವುನ್ನೂ ಸವಿಯದ ರೆಡ್ಡಿ ಕುಟುಂಬಕ್ಕೆ ಈಗ ಮತ್ತೊಂದು ಕಂಟಕ ಎದುರಾಗಿದೆ. ಖಚಿತ ಮೂಲಗಳ ಪ್ರಕಾರ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಅವರನ್ನು ಜಾರಿ ನಿರ್ದೇಶನಾಲಯ ಸದ್ಯದಲ್ಲೇ ಬಂಧಿಸಲಿದೆ.

ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ ಪ್ರಿವೆನ್ಶನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ ಅನುಸಾರ ಅರುಣಾ ಲಕ್ಷ್ಮಿ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಸೂಚನೆ ಹೋಗಿದೆ.

ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಅರುಣಾ ಲಕ್ಷ್ಮಿ ಹೆಸರು ಅಗತ್ಯಕ್ಕಿಂತ ಹೆಚ್ಚಾಗಿ ಕಾಣಿಸಿರುವುದೇ ಅವರ ಬಂಧನಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಅಂದಹಾಗೆ ಜನಾರ್ದನ ರೆಡ್ಡಿ ಮಾಲೀಕತ್ವದ JLR ಟ್ರೇಡಿಂಗ್ ಕಂಪನಿಯು ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಭಾಗಿಯಾಗಿದೆ ಎಂಬುದು ಸಚಿವಾಲಯದ ಬಲವಾದ ಗುಮಾನಿ. ಈ ಕಂಪನಿಯ ಹೆಸರಿನಲ್ಲಿರುವ L ಅಕ್ಷರ ಲಕ್ಷ್ಮಿ ಹೆಸರಿನ ಸಂಕೇತಾಕ್ಷರವಾಗಿದೆ. ಅದರರ್ಥ ಅರುಣಾ ಲಕ್ಷ್ಮಿಯೂ ಪ್ರಕರಣದಲ್ಲಿ ಭಾಗಿ ಎಂಬುದು ವಿಧಿತವಾಗಿದೆ.

ಈ ಹಿನ್ನೆಲೆಯಲ್ಲಿ, ಈ ವಾರಾಂತ್ಯ ರೆಡ್ಡಿ ಮತ್ತು ಅವರ ಕುಟುಂಬದ ಇತರರ ವಿರುದ್ಧವೂ ಮನಿ ಲಾಂಡ್ರಿಂಗ್ ಪ್ರಕರಣ ದಾಖಲಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+