ಡಿ.6ರಂದು ಮಿಡ್ ಡೇ ಪತ್ರಿಕೆಯ ಎರಡು ಆವೃತ್ತಿ ನೆಲಸಮ

ಡಿ.5ರಂದು ಕಳಿಸಲಾದ ಈ-ಮೇಲ್ ನಲ್ಲಿ ಪತ್ರಿಕೆಯ ಎರಡೂ ಆವೃತ್ತಿಗಳನ್ನು ಬಂದ್ ಮಾಡುತ್ತಿರುವುದಾಗಿ ನಿರ್ವಾಹಕ ನಿರ್ದೇಶಕ ಮತ್ತು ಸಿಇಓ ಮಂಜಿತ್ ಘೋಷಾಲ್ ತಿಳಿಸಿದ್ದಾರೆ. ಜಾಗರಣ ಪ್ರಕಾಶನ ಲಿ. ಮೇ 2010ರಲ್ಲಿ ಮಿಡ್ ಡೇ ಪತ್ರಿಕೆಯನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿತ್ತು.
ಮುಂಬೈನ ಆವೃತ್ತಿಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮ್ಯಾನೇಜ್ ಮೆಂಟ್ ತಿಳಿಸಿದೆ. ಆದರೆ, ಎರಡೂ ನಗರಗಳಲ್ಲಿನ ಬ್ಯೂರೋ ಮತ್ತು ಮಾರಾಟ ಕಚೇರಿಯನ್ನು ಉಳಿಸಿಕೊಳ್ಳಲಾಗುವುದು ಎಂದು ಪತ್ರಿಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ದೆಹಲಿ ಎಡಿಷನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಈ ಕ್ರಮ ತೆಗೆದುಕೊಂಡಿರುವ ದುರಾದೃಷ್ಟಕರ. ಪುಟ್ಟ ಮಗುವಿದ್ದ ಮದು ಎತ್ತರಕ್ಕೆ ಬೆಳೆದಿದೆ. ಆದರೆ ನೋಡನೋಡುತ್ತಲೇ ಸಾಯುತ್ತಿರುವುದನ್ನು ನೋಡುವುದು ನೋವಿನ ಸಂಗತಿ. ಈ ಕ್ರಮದ ಬಗ್ಗೆ ಸಂಪಾದಕೀಯ ಮಂಡಳಿಗೆ ಕನಿಷ್ಠ ಸುಳಿವೂ ಇರಲಿಲ್ಲ" ಎಂದು ದೆಹಲಿ ಬ್ಯೂರೋ ಚೀಫ್ ಅಮಿತ್ ಕುಮಾರ್ ಆಘಾತ ವ್ಯಕ್ತಪಡಿಸಿದ್ದಾರೆ.












Click it and Unblock the Notifications